ನಾನಾ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ಮಾಡಿ ಮನವಿ

Bharath Vaibhav
ನಾನಾ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ಮಾಡಿ ಮನವಿ
WhatsApp Group Join Now
Telegram Group Join Now

ಮೊಳಕಾಲ್ಮೂರು:-ರಾಜ್ಯದಲ್ಲಿ ಮನೆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹೊಸ ಕರೆನ್ಸಿ ಮೀಟರ್ ಅಳವಡಿಸಲಾಗುವುದೆಂದು ಬೆಸ್ಕಾಂ ಎಂಡಿ ಹೇಳಿರುವುದನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ ಬೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುಧುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಮಾತನಾಡಿದರು. ಬೆಸ್ಕಾಂ ಇಲಾಖೆ ಯೋಜನೆಯನ್ನು ಕೈಬಿಡಬೇಕು ಈ ಹಿಂದೆ ಇರುವ ಪದ್ಧತಿಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.ರಾಜ್ಯದಲ್ಲಿ ವಿದ್ಯುತ್ ಕಳ್ಳತನವಾಗುತ್ತಿದ್ದರು ಕೂಡ ಸರ್ಕಾರ ಮತ್ತೊಂದು ವಾಮ ಮಾರ್ಗದಲ್ಲಿ ವಿದ್ಯುತ್ ಕಳ್ಳತನವಾಗುತ್ತಿರುವುದನ್ನು ತಡೆಯದೆ ಇಂತಹ ದುರಲೋಚನೆ ಮೂಲಕ ಬಡವರ ರೈತರನ್ನು ವಂಚಿಸುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಬೆಸ್ಕಾಂ ಕರೆನ್ಸಿ ಮೀಟರ್ ಮನೆಗಳಿಗೆ ಅಳವಡಿಸಿದರೆ ಈಗ ಬಡವರಿಗೆ ಕೊಡುತ್ತಿರುವ ಉಚಿತ ವಿದ್ಯೆಗೆ ಕತ್ತಲೆ ಬೀಳುತ್ತದೆ ಹಣ ಪಾವತಿಸದೇ ಇದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಇದರಿಂದ ಸರ್ಕಾರ ವಾಮ ಮಾರ್ಗದಲ್ಲಿ ಬಡವರಿಂದ ರೈತರಿಂದ ಹಣ ವಸಲಿಗೆ ವಾಮ ಮಾರ್ಗ ಬಳಸುತ್ತಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಕರೆನ್ಸಿ ಮೀಟರ್ ಅಳವಡಿಸಬಾರದು ಎಂದು ಒತ್ತಾಯಿಸಿ ಸಹಾಯಕ ಕಾರ್ಯ ಪಾಲಕ ಅಭಿಯಂತರು ಬೆಸ್ಕಾಂ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋನಸಾಗರ ಮಂಜುನಾಥ ಕಾರ್ಯಧ್ಯಕ್ಷರಾದ ತಿಪ್ಪೇರಯ್ಯನ ಹಟ್ಟಿ ಚಂದ್ರಣ್ಣ. ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷರಾದ ದಾನ ಸೂರನಾಯಕ, ಗುರುಸ್ವಾಮಿ ಚಂದ್ರಣ್ಣ ನಾಗರಾಜ್ ಕನಕ ಶಿವಮೂರ್ತಿ ಮರಲಿಂಗಪ್ಪ ನಾಗೇಶ್ ನಾಗರಾಜ್ ವೀರೇಶ್ ಕೃಷ್ಣಮೂರ್ತಿ ಬೆಸ್ಕಾಂ ಇಲಾಖೆ ಸಿಬ್ಬಂದಿ ಬಸವರಾಜ್ ಇನ್ನು ಹಲವರು ಉಪಸ್ಥಿತರಿದ್ದರು.

 

ವರದಿ:-   ಪಿಎಂ ಗಂಗಾಧರ್

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!