Ad imageAd image

ಪ್ರೀತಿ ಹೆಸರಲ್ಲಿ ವೈದ್ಯೆಗೆ ಪಿಎಸ್‌ಐ ವಂಚನೆ : ದೂರು ದಾಖಲು

Bharath Vaibhav
ಪ್ರೀತಿ ಹೆಸರಲ್ಲಿ ವೈದ್ಯೆಗೆ ಪಿಎಸ್‌ಐ ವಂಚನೆ : ದೂರು ದಾಖಲು
WhatsApp Group Join Now
Telegram Group Join Now

ಬೆಂಗಳೂರು : ಪ್ರೀತಿ ಹೆಸರಲ್ಲಿ ವೈದ್ಯೆಗೆ ಪಿಎಸ್‌ಐ ವಂಚನೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಯುವತಿಯಿಂದ 1.71 ಲಕ್ಷ ಹಣ ಮೋಸ ಮಾಡಿದ ಆರೋಪ ಕೇಳಿಬಂದಿದೆ.

ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ನಗ್ನ ಫೋಟೋಗಳನ್ನ ಕಳುಹಿಸುವಂತೆ ಪೀಡಿಸುತ್ತಿದ್ದ ಅಘಾತಕಾರಿ ಅಂಶ ಕೂಡ ಬೆಳಕಿಗೆ ಬಂದಿದೆ.

ರಾಜ್ ಕುಮಾರ್ ಎಸ್ ಎಂಬ ಪೊಲೀಸ್ ಅಧಿಕಾರಿ ವಿರುದ್ಧ MBBS ವಿದ್ಯಾರ್ಥಿನಿ ಆರೋಪಗಳ ಸುರಿಮಳೆಗೈದಿದ್ದಾರೆ. ಬಸನಗುಡಿ ಪಿಎಸ್ ಐ ವಿರುದ್ಧ ಬೆಂಗಳೂರು ಕಮಿಷನರ್ ಗೆ ದೂರು ಕೊಡಲಾಗಿದೆ. ಪೊಲೀಸ್ ಫಜೀತಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

2020 ರಲ್ಲಿ ಫೇಸ್‌ ಬುಕ್‌ ಮೂಲಕ ಪಿಎಸ್‌ಐ ರಾಜ್‌ ಕುಮಾರ್‌ ಹಾಗೂ ಸಂತ್ರಸ್ತ ಯುವತಿ ಪರಿಚಿತರಾಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು.

ಈ ವೇಳೆ ವೈದ್ಯೆಯಿಂದ ಹಂತಹಂತವಾಗಿ ಹಣ ಪಡೆದಿದ್ದ ರಾಜ್‌ ಕುಮಾರ್‌ ಬಳಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದರು ಎಂದು ಯುವತಿ ಆರೋಪಿಸಿದ್ದಾಳೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!