ಸಿಂಧನೂರು :– ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ಚಾಚಾ ನೆಹರು ಅವರ ಸಂದೇಶವನ್ನು ನಾವು ಮರೆಯಬಾರದು ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರವಾಗಿ ಬಹುಕಾಲ ಶ್ರಮಿಸಿದವರು ಅದಕ್ಕಾಗಿ ಭಾರತದಲ್ಲಿ 14ನೇ ನೆವೆಂಬರ್ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ ಅದರಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
ಸುಕಲಪೇಟೆ ಸಿಂಧನೂರುನಲ್ಲಿ ಮುಖ್ಯ ಗುರುಗಳಾದ ಗುರುಬಸಯ್ಯ ಸರ್ ರವರು ದೇಶದ ಮಹನೀಯರನ್ನು ಮಕ್ಕಳ ಮುಖಾಂತರ ಪಾತ್ರದಲ್ಲಿ ವೇಷ ಭೂಷಣದಲ್ಲಿ ಅದ್ಭುತವಾಗಿ ಪರಿಚಯಿಸಿದರು ಹಾಗೂ ಆಟದ ಚಟುವಟಿಕೆಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವೇಷಭೂಷಣ ಪಾತ್ರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಲೆಯ ಶಿಕ್ಷಕರಿಂದ ಬಹುಮಾನ ವಿತರಸಲಾಯಿತು ಒನಕೆ ಓಬವ್ವ ಜೀವನದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವೀರಭದ್ರಪ್ಪ ರೈಲ್ವೆ ಇಲಾಖೆ ಇವರಿಗೆ ದ್ವಿತೀಯ ಬಹುಮಾನ ಶಿವಕುಮಾರ್ ನೈಸ್ ಟೈಲರ್ ಇವರಿಗೆ ತೃತೀಯ ಬಹುಮಾನ ಯಲ್ಲಪ್ಪ ಕವಿತಾಳ ಇವರಿಗೆ ಎಸ್ ಡಿಎಂಸಿ ಅಧ್ಯಕ್ಷರಾದ ಹೊನ್ನೂರ್ ಕಟ್ಟಿಮನಿ ಇವರಿಂದ ಬಹುಮಾನ ವಿತರಲಾಯಿತು.
ಈ ಸಂದರ್ಭದಲ್ಲಿ- ಎಸ್‌ಡಿಎಂಸಿ ಅಧ್ಯಕ್ಷರಾದ ಹೊನ್ನೂರು ಕಟ್ಟಿಮನಿ, ಮುಖ್ಯ ಗುರುಗಳಾದ ಗುರು ಬಸಯ್ಯ, ಶಿಕ್ಷಕರಾದ ವೆಂಕನಗೌಡ, ಶಿಕ್ಷಕಿರಾದ ಅಂಬಮ್ಮ, ರೇಣುಕಮ್ಮ, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು,
ವರದಿ:- ಬಸವರಾಜ ಬುಕ್ಕನಹಟ್ಟಿ