ಅಥಣಿ:- ಹುಲಗಬಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದು ಕಬ್ಬೂರ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಸಿದ್ದು ಕಬ್ಬೂರ ಮಾತನಾಡಿ ಗ್ರಾಮದ ಎಲ್ಲ ಹಿರಿಯರು ಹಾಗೂ ಗ್ರಾಮ ಪಂಚಾಯಿತಿ
ಸದಸ್ಯರು ನನ್ನ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ನನಗೆ ವಹಿಸಿ ಕೊಟ್ಟಿದ್ದಾರೆ. ಗ್ರಾಮಸ್ಥರು ಇಟ್ಟಿರುವ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಂತರ ಗ್ರಾಮ ಪಂಚಾಯಿತ ಸದಸ್ಯ ನಾಗರಾಜ ಕಾಂಬಳೆ ಮಾತನಾಡಿ ಹುಲಗಬಾಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ದು ಕಬ್ಬೂರ ಅವಿರೋಧ ಆಯ್ಕೆಯಾಗಿದ್ದಾರೆ ಗ್ರಾಮದ ಹಿರಿಯರು ಗ್ರಾಮ ಪಂಚಾಯತಿ ಎಲ್ಲ ಸದಸ್ಯರ ಸಹಮತದಿಂದ ಸಿದ್ದು ಕಬ್ಬೂರ ಅವರ ಆಯ್ಕೆಯಾಗಿದ್ದು ಗ್ರಾಮದ ಬಹುದಿನಗಳ ಜ್ವಲಂತ್ ಸಮಸ್ಯೆಗಳಾದ ಶುದ್ಧ ಕುಡಿಯುವ ನೀರು, ಒಳ ಚರಂಡಿ, ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸುವ ಮಹತ್ತರವಾದ ಜವಾಬ್ದಾರಿ ಅಧ್ಯಕ್ಷರ ಹೆಗಲಿಗೆ ಹಾಕಿದ್ದೆವೆ ಈ ಮಹತ್ವದ ಜವಾಬ್ದಾರಿಯನ್ನು ಇವರು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ನಂಬಿಕೆ ಇದೆ ಎಂದು ಹೇಳಿದರು
ಚುನಾವಣಾಧಿಕಾರಿಯಾಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ. ಅವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆಯಾಗಿದ್ದನ್ನು ಪ್ರಕಟಿಸಿದರು
ಈ ಸಂದರ್ಭದಲ್ಲಿ ಪಿಡಿಓ ನಾಗರಾಜ ಕಾಂಬಳೆ. ಗ್ರಾಮ ಪಂಚಾಯತಿ ಸದಸ್ಯರಾದ ಮಾರುತಿ ಹರಾಳೆ, ರಮೇಶ ಪಾಟಿಲ, ರವಿಗೌಡ ಪಾಟೀಲ, ಶಾಂತಾ ಪಡೋಲಕರ್, ಕಸ್ತೂರಿ ಮೂರಾಬಟ್ಟೆ, ಶ್ರೀಶೈಲ ಗಿರಿಮಲ್ಲನವರ, ಸಹದೇವ ಇಂಗಳೆ, ರೂಪಾ ಯಾದವ್, ಹಿರಿಯ ಮುಖಂಡರಾದ ಗಣಪತಿ ಯಾದವ್, ಸಂತೋಷ ಪಾಟಿಲ, ಅರುಣ ಪಾಟಿಲ, ತಮ್ಮಣ್ಣ ಅಡಗಲೆ, ಶಿವಾಜಿ ಶಿಂದೆ, ಮುರಸಿದ್ದ ಕಬ್ಬೂರ, ದಿಲೀಪ ಕಾಂಬಳೆ, ಸುರೇಶ ಯಾದವ, ರಾಜು ಗಡ್ಡೇಕರ. ಅಪ್ಪು ನಾಗನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :-ರಾಜು ವಾಘಮಾರೆ