Ad imageAd image

ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ಮಕ್ಕಳ ದಿನಾಚರಣೆ

Bharath Vaibhav
ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ಮಕ್ಕಳ ದಿನಾಚರಣೆ
WhatsApp Group Join Now
Telegram Group Join Now

ಧಾರವಾಡ :- ನಮ್ಮ ದೇಶದ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನದ ಸವಿ ನೆನಪಿಗಾಗಿ ಇಂದು ನಾವು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು ಮಕ್ಕಳು ತಮ್ಮ ಹಕ್ಕು ಕರ್ತವ್ಯ ಅರಿತು ಒಳ್ಳೆಯ ಗುಣ ರೂಢಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹಿರಿಯ ಶಿಕ್ಷಕಿ ಜೆ.ಆರ್ ಬಾಳೇರಿ ಹೇಳಿದರು.

ಅವರು ತಾಲೂಕಿನ ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಮಾತನಾಡುತ್ತಾ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಚಿಕ್ಕವರಿದ್ದಾಗಲೇ ಗುರು ಹಿರಿಯರಿಗೆ ಗೌರವ ಕೊಡುತ್ತಾ ಸತ್ಯ , ನ್ಯಾಯ , ನೀತಿ ಮುಂತಾದ ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಮಯಕ್ಕೆ ಬೆಲೆ ನೀಡುತ್ತಾ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮಕ್ಕಳು ಉತ್ತಮ ನಡತೆ ರೂಢಿಸಿಕೊಂಡು ಆದರ್ಶರಾಗಿ ಬದುಕಬೇಕು ಎಂದರು.

ಶಾಲಾ ಸಂಸತ್ತಿನ ಪ್ರಧಾನಿ ಮಂತ್ರಿ ಸಿದ್ದಲಿಂಗ ಗುಂಡಗೋವಿ ಮಾತನಾಡುತ್ತಾ ಮಕ್ಕಳು ಉತ್ತಮ ಗುರಿ ಹೊಂದಿ ಗುರುಗಳಿಗೆ ಗೌರವ ಕೊಡುತ್ತಾ ಗುರಿ ಸಾಧನೆಯ ಕಡೆ ಗಮನ ನೀಡುತ್ತಾ ಆದರ್ಶದ ಹಾದಿಯಲ್ಲಿ ಸಾಗಬೇಕು. ಮಕ್ಕಳ ದಿನಾಚರಣೆ ಆಚರಣೆಗಷ್ಟೇ ಸೀಮಿತವಾಗದೇ ಆ ಮೂಲಕ ಮಕ್ಕಳು ತಮ್ಮ ಕರ್ತವ್ಯ ಅರಿತು ನಡೆಯಬೇಕು.ಚೆನ್ನಾಗಿ ಓದುವುದನ್ನು ಬರೆಯುವದನ್ನು ರೂಢಿಸಿಕೊಳ್ಳಬೇಕು. ಬೇಗ ಏಳುವುದು ಒಳ್ಳೆಯ ಅಭ್ಯಾಸ, ಸಜ್ಜನರ ಸಹವಾಸ ಮಾಡಬೇಕು. ದುರ್ಜನರರಿಂದ ದೂರ ಇರಬೇಕು ಎಂದು ಹೇಳಿದನು.

ಇದೇ ವೇಳೆ ಶಾಲಾ ಮಕ್ಕಳಿಂದ ಮಕ್ಕಳ ದಿನಾಚರಣೆ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಶಾಲಾ ಬಾಲಕರಿಗಾಗಿ ವಾಲಿಬಾಲ್ , ಹೂಪ್ಸ್ , ಮ್ಯೂಸಿಕಲ್ ಚೇರ್ ಸ್ಪರ್ಧೆಗಳು, ಬಾಲಕಿಯರಿಗಾಗಿ ಗಡಿಗೆ ಒಡೆಯುವ ಸ್ಪರ್ಧೆ, ಲೇಮನ್ ಸ್ಪರ್ಧೆ, ಹೂಪ್ಸ್ ಸ್ಪರ್ಧೆಗಳು ಜರುಗಿದವು.ವೇದಿಕೆಯಲ್ಲಿ ಶಾಲಾ ಸಂಸತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪೂರ್ತಿ ಬಡಿಗೇರ ಸ್ವಾಗತಿಸಿದಳು . ಸೃಷ್ಠಿ ಮರಿತಮ್ಮನವರ ನಿರೂಪಿಸಿದಳು. ಕಲ್ಪನಾ ಪೂಜಾರ ವಂದಿಸಿದಳು.

 

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!