Ad imageAd image

ಚಿಲಕಲನೇರ್ಪು ; ಸಾಲ ಬಾಧೆ ನೇಣು ಬಿಗಿದುಕೊಂಡು ರೈತ ಶ್ರೀನಿವಾಸ್ ಆತ್ಮ ಹತ್ಯೆ.

Bharath Vaibhav
ಚಿಲಕಲನೇರ್ಪು ; ಸಾಲ ಬಾಧೆ ನೇಣು ಬಿಗಿದುಕೊಂಡು ರೈತ ಶ್ರೀನಿವಾಸ್ ಆತ್ಮ ಹತ್ಯೆ.
WhatsApp Group Join Now
Telegram Group Join Now

ಚೇಳೂರು : –  ಮೀಟರ್ ಬಡ್ಡಿ ದಂದೆಗೆ ಬ್ರೇಕ್ ಇಲ್ಲವಾದಲ್ಲಿ ಕಾನೂನು ಕ್ರಮ ; ಶ್ರೀನಿವಾಸ ನಾಯುಡು ಸೂಚನೆ,ಚೇಳೂರು : ಸಾಲಬಾಧೆ ತಾಳಲಾರದೆ  ರೈತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೂತನ ಚೇಳೂರು ತಾಲೂಕಿನ  ಚಿಲಕಲನೇರ್ಪು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ನೂತನ ಚೇಳೂರು ತಾಲೂಕಿನ ಚಿಲಕಲನೇರ್ಪು ಗ್ರಾಮದ ಶ್ರೀನಿವಾಸ (41)ವರ್ಷ  ಆತ್ಮಹತ್ಯೆ ಮಾಡಿಕೊಂಡ ರೈತ.ಬೆಳೆ ಸಾಲ,ಸೇರಿದಂತೆ ಇತರೆ ಹಲವು ಕಡೆ ತಿಂಗಳ ಬಡ್ಡಿ ಚೀಟಿ ಗಳಲ್ಲಿ  ಸುಮಾರು 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ. ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು.

ಇತ್ತ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ  ಬೆಳೆಗಳು ಸರಿಯಾದ ಧರ ಸಿಗದೇ  ಪ್ರತಿ ಬಾರಿಯೂ ನಷ್ಟದ ಸುಳಿಯಲ್ಲಿ ಸಿಲುಕಿ  ತೀವ್ರ ಮನನೊಂದು, ಬುಧವಾರ ಸಂಜೆ ಸುಮಾರು ರಾತ್ರಿ ಎಂಟು ಗಂಟೆಯಲ್ಲಿ ಹೆಂಡತಿಗೆ ಕರೆ ಮಾಡಿ ನಾನು ನೇಣು ಬಿಗಿದುಕೊಂಡು ಸಾಯುತ್ತಿರುವೆ ಎಂದು ಕರೆ ಮಾಡಿದ್ದಾನೆ.

ಇದರಿಂದ ಆತಂಕ ಗೊಂಡ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ ಆದರೆ ಹುಡುಕಿ ನೋಡುವಷ್ಟರಲ್ಲಿ ,ತಮ್ಮ ಜಮೀನಿನ ಪಕ್ಕದಲ್ಲಿ ಇರುವ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡು ಬಂದಿದೆ.ಸದ್ಯ ಪ್ರಕರಣ ಸಂಬಂಧ ಪಟ್ಟ ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗು ಹೊಂದಿದ್ದಾರೆ.ರೈತ ಶ್ರೀನಿವಾಸ್ ಮೃತದಿಂದ ಕುಟುಂಬವು ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳೀಯರಾದ ಟಿ.ಓ. ಆಂಜನೇಯಪ್ಪ ಮಾತನಾಡಿ
ಇತ್ತೀಚಿನ ದಿನಗಳಲ್ಲಿ ಕೆಲವರು   ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿ ಕೊಂಡಿದ್ದು,ಇತ್ತೀಚಿನ ದಿನಗಳಲ್ಲಿ ಅದಕ್ಕೆ ಸಾಥ್ ನೀಡುವ ರೀತಿಯಲ್ಲಿ ಹಳ್ಳಿಗಳಲ್ಲಿ ಮನೆಗಳ ಬಳಿ ಬಂದು ಮೈಕ್ರೋ ಫೈನಾನ್ಸ್ ದಂದೆ ನಡೆಸುತ್ತಿದ್ದಾರೆ,ಇದರಿಂದ ಹಲವಾರು ಕುಟುಂಬಗಳು ಸಾಲದ ಸಂಕಷ್ಟದಲ್ಲಿ ಸಿಲುಕಿವೆ,ಇಂಥಹ ಅಕ್ರಮ ಬಡ್ಡಿ ವ್ಯವಹಾರ ನಡೆಸುವ ದಂದೆಕೋರರನ್ನು ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರ ಹಾಗೂ ಗೃಹಿಣಿಯರ ಆತ್ಮ ಹತ್ಯೆಗಳು ಹೆಚ್ಚಾಗಬಹುದು,ಆದ್ದರಿಂದ ಈ ಕೂಡಲೇ ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ದಂದೆ ಕೋರರಿಗೆ ಖಡಕ್ ಎಚ್ಚರಿಕೆ : ರೈತ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಚೇಳೂರು ತಹಸೀಲ್ದಾರ್ ಶ್ರೀನಿವಾಸಲು ನಾಯುಡು  ಬೇಟಿ ನೀಡಿದ್ದು ರೈತನ ಸಾವಿನ ಬಗ್ಗೆ ಮಾಹಿತಿ ಪಡೆದು, ಯಾರೇ ಆಗಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಅಧಿಕ ಮೀಟರ್ ಬಡ್ಡಿ ದಂಧೆ ಹಾಗೂ ಚೀಟಿ ವ್ಯವಹಾರ ನಡೆಸುವುದು ಕಾನೂನು ವಿರುದ್ಧವಾಗಿದ್ದು,ಅಂಥವರ ವಿರುದ್ಧ ಯಾರಾದರೂ ದೂರು ನೀಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪರಿಹಾರ ಒದಗಿಸುವ ಭರವಸೆ : ಚೇಳೂರು ತಾಲೂಕಿನ ತಹಸೀಲ್ದಾರ್ ರವರು ಸ್ಥಳಕ್ಕೆ ಬಂದು  ಮೃತ ರೈತ ಶ್ರೀನಿವಾಸ್ ರವರ ತಂದೆ ಹಾಗೂ ಕುಟುಂಬದ ಜೊತೆ ಮಾತನಾಡಿ ರೈತ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಪರಿಹಾರವನ್ನು ಕೊಡಿಸುವ ಭರವಸೆ ನೀಡಿ ಕುಟುಂಬದವರಿಗೆ  ಸಾಂತ್ವನ ಹೇಳಿದರು.

ಇನ್ನು ರೈತ ಆತ್ಮ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಶ್ರೀನಿವಾಸಲು ನಾಯುಡು,ಉಪ ತಹಶೀಲ್ದಾರ್ ಸತೀಶ್,ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್  ರವರು ಬೇಟಿ ನೀಡಿದ್ದರು

ವರದಿ:-ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!