ಸೇಡಂ:- ಪಟ್ಟಣದ ಬಸ್ ನಿಲ್ದಾಣ ಹತ್ತಿರ ಸಿದ್ದೇಶ್ವರ ಗ್ರಾಫಿಕ್ಸ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಿದ್ದೇಶ್ವರ ಗ್ರಾಫಿಕ್ಸ್ ಸಂಹಯೋಗದೊಂದಿಗೆ ನಡೆದ ಕನ್ನಡ ರಾಜ್ಯೋತ್ಸವ, ಗೀತಗಾಯನ, ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಗೌರವ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ,
ಕನ್ನಡ ಕಟ್ಟಿದ ರಾಷ್ಟ್ರಕೂಟರ ನಾಡಿನ ಇತಿಹಾಸ ಎಲ್ಲೆಡೆ ಮೊಳಗಬೇಕು, ಕನ್ನಡ ಭಾಷೆ, ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸಿದ ನೃಪತುಂಗ, ಶ್ರಿವಿಜಯರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯ ಇದೆ ಎಂದು ಸಂಶೋಧಕರಾದ ಮೂಡುಬಿ ಗುಂಡೇರಾವ್ ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುಮಾ ಚಿಮ್ಮನಚೋಡ್ಕರ್ ಅವರು ಡಿಸೆಂಬರ್ ೨ರಂದು ಸೇಡಂನಲ್ಲಿ ನಡೆಯಲಿರುವ ತಾಲೂಕ ಹತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಹಾಲಪ್ಪಯ್ಯ ಮಠದ ಪೂಜ್ಯ ಪಂಚಾಕ್ಷರಿ ಮಹಾಸ್ವಾಮೀಜಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ವೀರ ಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ರಾಜಶೇಖರ್ ನಿಲಂಗಿ, ನಳಂದ ನವೋದಯ ತರಬೇತಿ ಕೇಂದ್ರ ಸಂಸ್ಥಾಪಕ ಕಾಶಪ್ಪ ತೇಲ್ಕಾಪಲ್ಲಿ, ಹಿರಿಯ ಸಾಹಿತಿ ಲಿಂಗರೇಡ್ಡಿ ಶೆರಿ, ಕರಳ್ಳಿ ಗುರುನಾಥ್ ರೆಡ್ಡಿ, ಪ್ರತಿಷ್ಠಾಪನ ಅಧ್ಯಕ್ಷ ಸಿದ್ದಪ್ಪ ತಳ್ಳಲ್ಲಿ, ಮೀನಾಕ್ಷಿ ರುದ್ನೂರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.
ಕಸಾಪ ಸಂಘಟನಾ ಕಾರ್ಯದರ್ಶಿ ಶ್ರೀಶೈಲ ರುದ್ನೂರು ಪ್ರಾಸ್ತಾವಿಕ ಮತನಾಡಿದರು, ಗೌರವ ಕಾರ್ಯದರ್ಶಿ ಪ್ರಕಾಶ್ ಗೊಣಗಿ ಅವರು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸಾಧಕರಾದ ಕಿಶನ್ ಚವ್ಹಾಣ, ಹಣಮಂತರಾಯ ಪಾಟೀಲ್ ಬಿಬ್ಬಳ್ಳಿ, ಶಿವುಕುಮಾರ ನೀಡಗುಂದಾ, ಅಂಜನಾ ಭೋವಿ, ಯಶೋಧಾ ರಾಠೋಡ್, ಶಿವುಕುಮಾರ ಮದ್ದೂರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಕನ್ನಡ ನಾಡು, ನುಡಿ ರಕ್ಷಣೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು, ಸ್ವಯಂ ಪ್ರೇರಣೆಯಿಂದ ಕನ್ನಡ ಭಾಷೆ, ಸಂಸ್ಕೃತಿ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಹೊಣೆಗಾರಿಕೆಯಾಗಿದೆ ಎಂದು ವೀರಶೈವ ಕಲ್ಯಾಣ ಮಂಟಪ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರು ಮಾತನಾಡಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.