ವಿಜಯಪುರ :- ನಿಡಗುಂದಿ ತಾಲೂಕ ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಮಟ್ಟದ ಖೋಖೊ ಪಂದ್ಯಾವಳಿಯಲ್ಲಿ ಬೆಳಗಾವಿ ಹಾಗೂ ಬೆಂಗಳೂರು ವಿಭಾಗದ ತಂಡಗಳು ಅಗ್ರಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವು.
ಆಲಮಟ್ಟಿಡ್ಯಾಂಸೈಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ 14 ವಯೋಮಾನ ಹಾಗೂ 17 ವಯೋಮಾನದೊಳಗಿನ ಬಾಲಕ/ಬಾಲಕಿಯರ ಖೋಖೊ ಸ್ಪರ್ಧೆಗಳು ಲೀಗ್ ಮಾದರಿಯಲ್ಲಿ ಸಹಸ್ರಾರು ಪ್ರೇಕ್ಷಕರ ಮಧ್ಯ ಜರುಗಿದವು.
17 ವಯೋಮಾನದೊಳಗಿನ (ಪ್ರೌಢಶಾಲಾ ಹಂತ) ಬಾಲಕರ ಸ್ಪರ್ಧೆಯಲ್ಲಿ ಬೆಳಗಾವಿ ವಿಭಾಗ ಪ್ರಥಮ, ಬೆಂಗಳೂರು ವಿಭಾಗ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ವಿಭಾಗ ಪ್ರಥಮ, ಬೆಳಗಾವಿ ವಿಭಾಗ ದ್ವಿತೀಯ ಸ್ಥಾನ ಪಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ.ಬಿಇಓ ವಸಂತ ರಾಠೋಡ, ಸಂಗಮೇಶ ಪೂಜಾರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಎಸ್. ಲಾಳಶೇರಿ, ಉಮೇಶ ಕೌಲಗಿ, ಜಿ.ಸಿ. ಮುತ್ತಲದಿನ್ನಿ, , ಎಂ.ಎಂ. ಮುಲ್ಲಾ, ಸಲೀಂ ದಡೆದ, ಮತ್ತೀತರರು ಇದ್ದರು.
ವರದಿ :-ಅಲಿ ಮಕಾನದಾರ