ನಿಪ್ಪಾಣಿ :- ಮೂರುವರೆ ಶಕ್ತಿಪೀಠಗಳಲ್ಲಿ ಒಂದಾದ ಕರವೀರ ವಾಸಿನಿ ಕೊಲ್ಲಾಪುರದ ಮಹಾಲಕ್ಷ್ಮಿಗೆ ಪ್ರತಿ ವರ್ಷ ನಾಡಹಬ್ಬ ದಸರಾ, ದೀಪಾವಳಿ, ಹೋಳಿ ಹಬ್ಬ,ನಾಗರ ಪಂಚಮಿ ಸೇರಿದಂತೆ ವರಮಹಾಲಕ್ಷ್ಮಿ ತುಳಸಿ ಪೂಜೆ ಕೃಷ್ಣ ಜನ್ಮಾಷ್ಟಮಿ ಅಮಾವಾಸ್ಯೆ ಹುಣ್ಣಿಮೆ ಹಾಗೂ ಪ್ರತಿ ಶುಕ್ರವಾರ ಮಂಗಳವಾರ ದಂದು ವಿಶೇಷ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯುತ್ತದೆ.
ಅದರಲ್ಲೂ ನಾಡಹಬ್ಬ ದಸರಾದಲ್ಲಂತೂ 9 ದಿನಗಳವರೆಗೆ ದುರ್ಗೆಯ 9 ಅವತಾರಗಳಲ್ಲಿ ಅಲಂಕಾರಪೂಜೆ ನಡೆಯುತ್ತದೆ.ಅದರಲ್ಲೂ ಪ್ರತಿವರ್ಷ ನಡೆಯುವ ಮಹಾ ಪಲ್ಲಕ್ಕಿ ಉತ್ಸವ,ಕಿರಣೋತ್ಸವ ಭಕ್ತರ ಕಣ್ಮನ ಸೆಳೆಯುತ್ತವೆ.ಇದು ಅಲ್ಲದೆ ಕಾರ್ತಿಕ ಶುಕ್ಲ ಪೂರ್ಣಿಮೆ ಶುಕ್ರವಾರದಂದು ಹಾಗೂ ತುಳಸಿ ವಿವಾಹದ ದಿನ ಗುರುವಾರದಂದು ಮಹಾಲಕ್ಷ್ಮಿಗೆ ತುಳಸಿದೇವಿ ರೂಪದಲ್ಲಿ ಅಲಂಕಾರ ಪೂಜೆ ನಡೆಯಿತು. ಮತ್ತೊಂದು ವಿಶೇಷವೆಂದರೆ ಇಲ್ಲಿ ನಡೆಯುವ ಮಂದಿರದಲ್ಲಿಯ ಕಿರಣೋತ್ಸವ ನೋಡುಗರ, ಭಕ್ತರ,ಕಣ್ಮನ ಸೆಳೆಯುತ್ತದೆ.
ಹಾಗಾದರೆ ಬನ್ನಿ ಭಾರತ ವೈಭವ ನ್ಯೂಸ್ ಪ್ರತಿನಿಧಿ ಮಹಾವೀರ ಚಿಂಚಣೆಯವರು ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಗೆ ನಡೆಯುವ ವಿಶೇಷ ಪೂಜಾಲಂಕಾರಗಳ ದೃಶ್ಯಗಳನ್ನು ಸೆರೆಹಿಡಿದಿದ್ದು ತಾವು ಕಣ್ತುಂಬಿಕೊಳ್ಳಿ.
ವರದಿ:-ಮಹಾವೀರ ಚಿಂಚನಿ