ಮಾನ್ವಿ: -ಪಟ್ಟಣದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ವಂದೇ ಮಾತರಂ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರಿ ಅಕ್ಕಮ್ಮನವರು ಚಾಲನೆ ನೀಡಿ ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರ ಜೋತೆಗೆ ಈಡಿ ಭಾರತ ದೇಶವನ್ನು ಕಟ್ಟವ ಕೆಲಸವನ್ನು ಮಾಡಬೇಕಾಗಿದೆ. ದೇಶವನ್ನು ಕಟ್ಟುವುದು ಎಂದರೆ ಬೃಹತ್ ಕಟ್ಟಡಗಳನ್ನು ಕಟ್ಟುವುದಲ್ಲ ದೇಶದಲ್ಲಿ ಸಂಸ್ಕೃತಿ,ಸಾAಸ್ಕರ,ಪರAಪರೆಯನ್ನು ಉಳಿಸಿ ಬೆಳೆಸುವ ಮೂಲಕ ನಾವು ವಾಸಿಸುವ ಭಾರತ ದೇಶವನ್ನು ಸುಭದ್ರವಾಗಿ ಸುಂದರವಾಗಿ ಕಟ್ಟೋಣ ಎಂದು ಕರೆ ನೀಡಿದರು.
ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು. ಮಂಜುನಾಥ ಕಮತರ್ ಮಾತನಾಡಿ ಮಾಜಿ ಪ್ರದಾನಿ ಜವಾಹರಲಾಲ್ ನೆಹರುರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಮಕ್ಕಳು ನೇತಾಜಿ ಸುಭಾಷ ಚಂದ್ರಬೋಸ್ ರಂತಹ ಉನ್ನತ ವ್ಯಕ್ತಿತ್ವವನ್ನು ,ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು . ನಮ್ಮ ಹಿಂದೂ ದೇಶ ಯಾವತ್ತಿಗೂ ವಿಜಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಜೈಹಿಂದ್ ಎನ್ನುವ ಘೋಷಣೆಯನ್ನು ನೀಡಿದವರು ಕೂಡ ಸುಭಾಷ ಚಂದ್ರಭೋಸ್ ರವರು ಸ್ವಾಮಿ ವಿವೇಕನಂದರು ನಮ್ಮ ಮಕ್ಕಳಿಗೆ ಅದರ್ಶವಾಗಿರಬೇಕು ಎಂದು ತಿಳಿಸಿದರು.
ವಿಶ್ವಚೇತನ ವಿದ್ಯಾಸಂಸ್ಥೆ,ಜ್ಞಾನನಿಧಿ ವಿದ್ಯಾಸಂಸ್ಥೆ,ಆನAದ ಶಾಲೆಯ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ವಿಶ್ವಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಎಂ.ಎA. ಹಿರೇಮಠ ಕಾರ್ಯದರ್ಶಿ ಗೀತಾ ಹಿರೇಮಠ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು,ಪಾಲಕರು, ಇದ್ದರು.
೧೫-ಮಾನ್ವಿ-೧:
ಮಾನ್ವಿ: ಪಟ್ಟಣದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ವಂದೇ ಮಾತರಂ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.