Ad imageAd image

ಗ್ರಾಮ ಪಂಚಾಯತಿಯನ್ನೇ ಲೂಟಿ ಮಾಡಿದ ಕಾರ್ಯದರ್ಶಿ : 1.49 ಕೋಟಿ ಹಣ ದುರುಪಯೋಗ 

Bharath Vaibhav
ಗ್ರಾಮ ಪಂಚಾಯತಿಯನ್ನೇ ಲೂಟಿ ಮಾಡಿದ ಕಾರ್ಯದರ್ಶಿ : 1.49 ಕೋಟಿ ಹಣ ದುರುಪಯೋಗ 
WhatsApp Group Join Now
Telegram Group Join Now

ಹಾಸನ : ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೇ ಸಂಪನ್ಮೂಲ ಹಣವನ್ನ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬಂದಿದೆ.

ವಿವಿಧ ಯೋಜನೆಯಲ್ಲಿ 1.49 ಕೋಟಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ.

ಬಿಎನ್ ಭುವನ್ ಅಮಾನತಾದ ಕಾರ್ಯದರ್ಶಿ. ಕೊಣನೂರು ಗ್ರಾ.ಪಂ. ಜೊತೆಗೆ ಗಂಗೂರು ಗ್ರಾ.ಪಂ. ಪ್ರಭಾರ ಕಾರ್ಯದರ್ಶಿಯಾಗಿದ್ದ ಬಿ.ಎನ್.ಭುವನ್ ಹದಿನೈದನೇ ಹಣಕಾಸು, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿಯಮಬಾಹಿರವಾಗಿ 1.49 ಕೋಟಿ ಹಣ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾ ಪಂಚಾಯತ್ ಸಿಇಒ ಬಿಆರ್ ಪೂರ್ಣಿಮಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸರ್ಕಾರದ ಹಣ ದುರುಪಯೋಗ ಮಾಡಿದ ಪ್ರಕರಣಗಳಲ್ಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲು ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!