ಕಲಘಟಗಿ:- ರೈತರ ಜಮೀನು, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸುತ್ತಿರುವ ರಾಜ್ಯ ಸರ್ಕಾರದ ವಕ್ಫ್ ಕಾಯಿದೆ ವಿರೋಧಿಸಿ ಶುಕ್ರವಾರ ಪಟ್ಟಣದ ಆಂಜನೇಯ ಸರ್ಕಲ್ ನಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಭಾರತಿಯ ಕಿಸಾನ್ ಸಂಘ ಹಾಗೂ ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದಲ್ಲಿನ ಎಪಿಎಮ್‌ಸಿ ಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಿ ಕೆಲವು ಘಂಟೆಗಳ ಕಾಲ ವಾಹನಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ವಕ್ಫ್ ಹಟಾವ್ ದೇಶ ಬಚಾವ್ ಘೋಷಣೆ ಕೂಗಿದರು.
ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ, ಅನ್ನದಾಸೋಹ ಮಾಡುವಂತ ಹಿಂದು ಸಮಾಜದ ಮಠ ಮಂದಿರ ಹಾಗೂ ರುದ್ರಭೂಮಿಯನ್ನು ಸಹ ಬಿಡದೆ ವಕ್ಫ್ ಅಸ್ತಿಗಳನ್ನಾಗಿ ಮಾಡಿವೆ. ನಮ್ಮ ಆಸ್ತಿ ನಮ್ಮ ಹಕ್ಕು ಇದರ ಮೇಲೆ ಯಾರೇ ಕಣ್ಣು ಹಾಕಿದರೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಭಜರಂಗದಳದ ಪದಾಧಿಕಾರಿಗಳು ಆಗ್ರಹಿಸಿದರು.
ಅಸಂವಿಧಾನಿಕವಾದ, ಸರ್ವಾಧಿಕಾರಿ ಧೋರಣೆಯನ್ನ ತಗೆದುಕೊಂಡ ಸರಕಾರ ಕೂಡಲೇ ಅತೀಕ್ರಮಿಸಿದ ಆಸ್ತಿಯನ್ನು ಮರಳಿ ರೈತರಿಗೆ ಮತ್ತು ಮಠ ಮಂದಿರಗಳಿಗೆ ನೀಡಬೇಕು, ರೈತರ ಉತಾರಿನಲ್ಲಿ. ವಕ್ಫ ಆಸ್ತಿಯಂದಾಗಿರುವುದನ್ನು ಕೂಡಲೇ ಮೊದಲಿನ ಉತಾರದಂತೆ ತಿದ್ದುಪಡಿ ಮಾಡಬೇಕು.
ವಕ್ಫ್ ಹೆಸರಿನಲ್ಲಿ “ಲವ್ ಜಿಹಾದದಂತೆ ಲ್ಯಾಂಡ್ ಜಿಹಾದ್” ಮಾಡ್ತಾ ಇದೆ ಇದನ್ನು ಉಗ್ರವಾಗಿ ಭಜರಂಗಧಳ ವಿರೋಧಿಸುತ್ತದೆ. ಇದೆಲ್ಲವನ್ನು ಕೂಲಂಕುಶವಾಗಿ ಪರೀಶೀಲಿಸಿ ಜಿಲ್ಲಾ ಧಿಕಾರಿಗಳು ಒಂದು ಸಮಿತಿಯನ್ನು ರಚಿಸಿ, ರಾಜ್ಯದಲ್ಲಿ.. ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ನಮೋದಿಸಿರುವ ಎಲ್ಲಾ ಅಸ್ತಿಗಳನ್ನು ಮರಳಿ ಸಂಬAಧಪಟ್ಟAತಹ ಆಸ್ತಿ ಮಾಲೀಕರಿಗೆ ಶೀಘ್ರವೇ ತ್ವರಿತವಾಗಿ ಹಸ್ತಾಂತೀರಿಸುವ ಕಾರ್ಯ ಜಾರಿಯಾಗಬೇಕು ಎಂದರು ಹಾಗೂ ಹಿಂದೂ ಸಮಾಜ ಮತ್ತು ರೈತರನ್ನು ಹಗುರವಾಗಿ ಕಂಡ ಮಂತ್ರಿ ಜಮೀರ್ ಅಹ್ಮದರನ್ನು ಕೂಡಲೇ ಮಂತ್ರಿ ಮಂಡಲದಿAದ ವಜಾಮಾಡಿ ಅವರ ಮೇಲೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿರೇಶ ಮುಳಗುಂದಮಠ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂದೆ,ಐ.ಸಿ ಗೋಕುಲ,ಕಲ್ಲಪ್ಪ ಪುಟ್ಟಪ್ಪನವರ, ಭಜರಂದಳದ ಪದಾಧಿಕಾರಿ ಶಿವಾನಂದ ಸತ್ತಿಗೇರಿ, ರಮೇಶ ಕೊರವಿ, ಅನುದೀಪ ಕುಲಕಣ ð, ಸದಾನಂದ ಚಿಂತಾಮಣ ,ನಿಂಗಪ್ಪ ಹುಲಿ, ಪರಶುರಾಮ ಹುಲಿಹೋಂಡ, ಚಂದ್ರಗೌಡ ಪಾಟೀಲ, ಮಂಗಲಪ್ಪ ಲಮಾಣ , ಬಸವರಾಜ ಶೆರವಾಡ, ಸುರೇಶ್ ಶೀಲವಂತರ, ಆನಂದ ಕಡ್ಲಾಸ್ಕರ,ಅರ್ಜುನ ಲಮಾಣ , ಬಸವರಾಜ್ ಹೊನ್ನಿಹಳ್ಳಿ, ಪುಂಡಲಿಕ ಜಾದವ್, ತಾಲೂಕಿನ ರೈತರು ಭಜರಂಗದಳ ಹಾಗೂ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶಶಿಕುಮಾರ ಕಲಘಟಗಿ