ಬೆಳಗಾವಿ : ಹೆದ್ದಾರಿಯಲ್ಲಿ ಕಾರನ್ನು ಅಡ್ಡಗಟ್ಟಿ ಕಾರಿನ ಸಮೇತ ಬರೋಬ್ಬರಿ 75 ಲಕ್ಷ ರೂಪಾಯಿ ಹಣವನ್ನೂ ಲೂಟಿಕೋರರು ದರೋಡೆ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ನಡೆದಿದೆ.
ಪಿಸ್ತೂಲ್ ತೋರಿಸಿ ಕಾರಿನಲ್ಲಿದ್ದವರನ್ನು ಬೆದರಿಸುವ ಮೂಲಕ ಖದೀಮರು ದರೋಡೆ ಮಾಡಿದ್ದು, ಕಾರು ಹಣದೊಂದಿಗೆ ಪರಾರಿಯಾಗಿದ್ದಾರೆ. ಚಿನ್ನ ಮಾರಾಟ ಮಾಡಿ ಬರುತ್ತಿದ್ದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಲೂಟಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೂರಜ್ ವನಮಾನೆ ಎಂಬುವವರ ಕಾರನ್ನು ಅಡ್ಡಗಟ್ಟಿ ದರೋಡೆಕೋರರು ಬೆದರಿಸಿ ಹಣ ಮಾತ್ರವಲ್ಲ ಕಾರನ್ನೂ ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಕೇರಳಕ್ಕೆ ಹಣದೊಂದಿದೆ ಸೂರಜ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸಂಕೇಶ್ವರ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.