ಬೆಂಗಳೂರು : ಆರೋಗ್ಯ ಏರುಪೇರಾಗಿ ಬಿ.ಪಿ ಹಾಗೂ ಶುಗರ್ ಲೆವೆಲ್ ಬೀಳುತ್ತಲ್ಲ.. ಹಾಗೆ ಕಾಂಗ್ರೆಸ್ ಸರ್ಕಾರವೂ ಬಿದ್ದುಹೋಗಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ರು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಹೈ ಕಮಾಂಡ್ ಅನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ನವರ ಸರ್ಕಾರ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ.
ಅಲ್ಲದೇ ಸದ್ಯದಲ್ಲೇ ಹೊಸ ಯೋಜನೆಯನ್ನು ಜಾರಿಗೆ ತಂದು ಇನ್ನಷ್ಟು ಹಣವನ್ನು ಲೂಟಿ ಹೊಡೆಯಲು ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಜನರು ಕಟ್ಟುತ್ತಾರೆ, ಹೀಗೆ ಕಟ್ಟಿದ ಹಣ ಎಲ್ಲಿಗೆ ಹೋಗುತ್ತಿದೆ, ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಅಂದಮೇಲೆ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಇಡೀ ರಾಜ್ಯದ ಜನರಿಗೆ ಬರುತ್ತಿದೆ ಎಂದು ಕಿಡಿಕಾರಿದರು.
ಜಯನಗರಕ್ಕೆ ಅನುದಾನ ನೀಡಬೇಕು ಎಂದರೆ ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳುತ್ತಾರೆ ಅಲ್ವಾ, ಅವರೇನು ಪಾಳೇಗಾರನಾ.? ಅಥವಾ ಹೈದರಬಾದ್ ನ ನಿಜಾಮನ, ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡ ಅವರು ಡಿಕೆ ಶಿವಕುಮಾರ್ ಅಲ್ಲ ಎಂದು ಹೇಳಿದರು.
ಅಲ್ಲದೇ ಕಳೆದ 300 ವರ್ಷದಿಂದ ಬೆಂಗಳೂರಲ್ಲೇ ಇದ್ದೀರಾ ಆದರೆ ಇಲ್ಲಿಗೆ ಅನುದಾನ ಕೊಡಬೇಕು ಅಂದರೆ ತಗ್ಗಿ ಬಗ್ಗಿ ನಡೆಯಬೇಕಾ.? ಜಯನಗರಕ್ಕೆ ಅಲ್ಲಿನ ಜನ ಕಟ್ಟಿರುವ ತೆರಿಗೆಯನ್ನು ನೀಡಿ ನಿಮ್ಮ ಕೈಯಿಂದ ಯಾವುದೇ ಹಣ ನೀಡಿ ಎಂದು ಕೇಳುತ್ತಿಲ್ಲ ಎಂದು ಅಶೋಕ್ ಆಕ್ರೋಶ ಹೊರಹಾಕಿದರು.
ಇನ್ನು ಇದೇ ವೇಳೆ, ಪಿಎಂ ಮೋದಿಯ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪದ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಉನ್ನತ ಸ್ಥಾನದಲ್ಲಿರುವವರ ಬಗ್ಗೆ ಹೀಗೆ ಮಾತನಾಡಬೇಕು ಎಂದು ತಿಳಿದಿಲ್ಲ. ಪ್ರಧಾನಿ ಮೋದಿ ಏನೋ ಹೇಳಿದ್ದಾರೆ ಎಂದರೆ ಅಲ್ಲಿ ಲೂಟಿ ಆಗಿದೆ ಎಂದರ್ಥ.
ಆದರೆ ಕಾಂಗ್ರೆಸ್ ಅವರ ಗುಟ್ಟು ಎಲ್ಲಿ ಹೊರಬರುತ್ತದೆಯೋ ಎಂಬ ಭಯದಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಸಾಕ್ಷಿ ಸಮೇತ ಮಾತನಾಡಿ ಎಂದು ಹೇಳುತ್ತಿದ್ದಾರೆ. ನಿಮಗೆ ನಿಜಕ್ಕೂ ಸಾಕ್ಷಿ ಬೇಕು ಅಂದರೆ ಈ ಪ್ರಕರಣವನ್ನು ಎಸ್ ಐ ಟಿ ಗೆ ನೀಡಿ ಆಗ ಅವರು ಸಾಕ್ಷಿ ಸಮೇತ ಉತ್ತರ ನೀಡುತ್ತಾರೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಬಗ್ಗೆ ಮಾತನಾಡಿದ್ದು, ರೈತರ ಜಮೀನು ನುಂಗುತ್ತಿರುವ ವಕ್ಫ್ ಬೋರ್ಡ್ ಕೊಳ್ಳಿ ದೆವ್ವ ಇದ್ದಂತೆ, ಅದು ಬಂದಲ್ಲಿ ಜನರಿಗೆ ಒಳ್ಳೆಯದಗಲ್ಲ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ವಕ್ಫ್ ಅಟ್ಟಹಾಸ ಆರಂಭವಾಗಿದೆ, ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.