ಬಾಗಲಕೋಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾದ ಕಬ್ಬು ಬೆಳೆಗಾರರ ನಿಯೋಗವು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿ ಮಾಡಬೇಕು ಎಂದು ಮನವಿ ಮಾಡಿತು.
ಈ ವೇಳೆ ರೈತರ ಮನವಿಗೆ ಸ್ಪಂದಿಸಿದ ಸಿಎಂ, ಇನ್ನು 4 ದಿನಗಳಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಸುವುದಾಗಿ ಸಿಎಂ ತಿಳಿಸಿದರು.
ಈ ಸಂಬಂಧ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿ ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳದಲ್ಲಿದ್ದ ಸಚಿವ ಶಿವಾನಂದ ಪಾಟೀಲ್ ಹಾಗೂ ಆರ್.ಬಿ.ತಿಮ್ಮಾಪುರ ಅವರಿಗೆ ಸಿಎಂ ಸೂಚನೆ ನೀಡಿದರು.
ಅಲ್ಲದೇ ಸಭೆ ನಡೆಸಿ ನಾಲ್ಕು ದಿನಗಳಲ್ಲಿಯೇ ಸಮಗ್ರ ವರದಿಯನ್ನೂ ತಮಗೆ ಸಲ್ಲಿಸುವಂತೆಯೂ ಖಡಕ್ ಆಗಿ ಆದೇಶಿಸಿದರು.
ಕಬ್ಬಿಗೆ ರೂ.3500 ನಿಗದಿ ಮಾಡಬೇಕು ಎಂಬುವುದು ಕಬ್ಬು ಬೆಳೆಗಾರರ ನಿರಂತರ ಬೇಡಿಯಾಗಿದ್ದು, ಸದ್ಯದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಕಬ್ಬು ಬೆಳೆಗಾರರ ನಿಯೋಗದ ಜೊತೆಗಿನ ಚರ್ಚೆಯ ಸಂದರ್ಭ ಸಿಎಂ ಭರವಸಿ ನೀಡಿದರು.