- ಕಲಘಟಗಿ: -ಅಧಿಕಾರಿಗಳು ತ್ರೆöÊಮಾಸಿಕ ಸಭೆಗೆ ಬರುವಾಗ ಅಧಿಕೃತ ಮಾಹಿತಿಯೊಂದಿಗೆ ಹಾಜರಾಗಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದರು.
ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಪಂಚಾಯತಿ, ತಾಲ್ಲೂಕ ಪಂಚಾಯತಿ ಸಯೋಗದಲ್ಲಿ ತಾಲ್ಲೂಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ೨೦೨೪- ೨೫ ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿತ ಸಾಗುವಳಿದಾರ ರೈತರ ಭೂಮಿ ಪಟ್ಟಾ ನೀಡಲು ಒಂದು ವಾರದಲ್ಲೇ ಪೂರ್ಣಗೊಳ್ಳಿಸಲು ಅಧಿಕಾರಿಗಳಿಗೆ ಸಚಿವ ಲಾಡ್ ಗಡುವು ಕೋ ಆಪರೇಟಿವ ಸೊಸಾಯಿಟಿ ಜಾಗೆಯ ಕುರಿತು ಸರ್ವೆ ಅಧಿಕಾರಿಗಳಿಗೆ ೭ದಿವಸಗಳಲ್ಲಿ ವರದಿ ಸಲ್ಲಿಸಲು ತಿಳಿಸಿದರು.
ಮತಕ್ಷೇತ್ರದ ಗಲಗಿನಗಟ್ಟಿ, ಅಳ್ಳಾವರ, ಧಾರವಾಡ ತಾಲ್ಲೂಕಿನ ಸುತ್ತಮುತ್ತಲಿನ ಅರಣ್ಯ, ಪಾರಮಿಂಗ್ ಸೊಸೈಟಿ, ಬಗರ್ ಹುಕುಂ ಸಾಗುವಳಿದಾರ ರೈತರ ಭೂಮಿ ಪಟ್ಟಾ ನೀಡಲು ಒಂದು ವಾರದಲ್ಲೇ ಪೂರ್ಣಗೊಳ್ಳಿಸಬೇಕು ಎಂದು ತಹಸೀಲ್ದಾರ ಹಾಗೂ ಭೂಮಾಪಾನ ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿದರು.

ಸೆಪ್ಟೆಂಬರ್ ೧೫ ರಂದು ಬೆಂಗಳೂರಿನಲ್ಲಿ ಸಭೆ ಕರೆದು ೧೫ ದಿನಗಳಲ್ಲಿ ವರದಿ ಸಲ್ಲಿಸಲು ತಿಳಿಸಿದರೂ ನಿರ್ಲಕ್ಷವೇಕೆ ಎಂದು ಸಚಿವರು ಭೂಮಾಪನ ಇಲಾಖೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.ತಾಲ್ಲೂಕಿನ ಮಿಶ್ರಿಕೋಟಿ ಹಾಗೂ ವಿವಿಧ ಗ್ರಾಮಗಳ ಖಾಸಗಿ ಹಾಗೂ ಸರ್ಕಾರಿ ಜಮೀನಿನಲ್ಲಿ ವಾಸವಿದ್ದವರ ಮಾಹಿತಿ ಪಡೆದು ಸರ್ವೇ ಕಾರ್ಯ ನಡೆಸಿ ಅವರಿಗೆ ಹಕ್ಕು ಪತ್ರ ನೀಡಿ ಉಪ ಗ್ರಾಮಗಳಾಗಿ ಪರಿವರ್ತಿಸಿ ಜನರಿಗೆ ಮೂಲಭೂತ ಸೌಕರ್ಯ ನೀಡಲು ತಿಳಿಸಿದರು.
ಮಳೆ ಗಾಳಿಗೆ ಬೆಳೆ ಹಾನಿಯಾದ ರೈತರಿಗೆ ಸ್ಥಳೀಯ ವಿಪತ್ತು ಪರಿಹಾರ ನಿಧಿಯಿಂದ ಎಷ್ಟು ರೈತರಿಗೆ ಪರಿಹಾರ ನೀಡಿದ್ದೀರಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ೧೩ ಸಾವಿರ ರೈತರ ಅರ್ಜಿ ಸಲ್ಲಿಸಿದ್ದು ಪರಿಹಾರಕ್ಕೆ ವಿಮಾ ಕಂಪನಿಯವರಿಗೆ ಕಳಿಸಲಾಗಿದೆ ಎಂದರು.
ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಮೊದಲು ೨ ಲಕ್ಷದ ೩೩ ಸಾವಿರ ಜಾನುವಾರು ಇದ್ದಿದ್ದು ಈಗ ೧ಲಕ್ಷದ ೯೨ ಸಾವಿರದಷ್ಟಿವೆ ಎಂದು ಪಶು ಸಂಗೋಪನೆ ಇಲಾಖೆಧಿಕಾರಿಗಳು ಮಾಹಿತಿ ನೀಡಿದರು.
ಸಚಿವರು ಮಾತನಾಡಿ ಜಾನುವಾರ ಸಂಖ್ಯೆ ಕಡಿಮೆಯಾಗಲು ಕಾರಣವೇಣು ಅವುಗಳ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.
ಡಿಪೋ ಘಟಕ ಬಂದ ಮಾಡಿ ಬಿಡೀ:
ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ದಿನನಿತ್ಯ ಬಸ್ ಗಾಗಿ ವಿದ್ಯಾರ್ಥಿಗಳು ಹಾಗೂ ಪ್ರಯಾಣ ಕರು ಪರದಾಡುತ್ತಿದ್ದಾರೆ ಬಸ್ ಸೌಲಭ್ಯ ಸಮಯಕ್ಕೆ ಸರಿಯಾಗಿ ನೀಡದಿದ್ದರೆ ಪಟ್ಟಣದ ಬಸ್ ಡಿಪೋ ಬಂದ ಮಾಡಿಕೊಂಡು ಹೋಗಿ ಎಂದು ಸಚಿವರು ಸಾರಿಗೆ ಇಲಾಖೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.
ಶಕ್ತಿ ಯೋಜನೆಯಿಂದ ಬಸ್ ಸಮಸ್ಯೆಯಾಗಿದೆ ಕಲಘಟಗಿ ಡಿಪೋಕ್ಕೆ ೨೦ ಬಸ್ ಅವಶ್ಯವಿದ್ದು ಈಗಾಗಲೇ ೧೦ ಹೊಸ ಬಸ್ ಗಳು ಬರುತ್ತಿದ್ದು ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದರು.
ಕಚೇರಿಯಲ್ಲಿ ಕುಳಿತರೆ ಸಾಲದು ಸಮಸ್ಯೆ ಇದ್ದಲ್ಲಿ ಬಂದು ಬಗೆಹರಿಸುವ ಕೆಲಸ ಮಾಡಿ ಎಂದು ಸಚಿವರು ಜಿಲ್ಲೆಯ ಡಿಪೋ ಘಟಕದ ಅಧಿಕಾರಿಗಳಿಗೆ ಖಡಕಾಗಿ ತಿಳಿಸಿದರು.
ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ: ವಿದ್ಯುತ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸಚಿವರು ಹೇಳಿದರು. ಬಮ್ಮಿಗಟ್ಟಿ, ಅರಳಿಕಟ್ಟಿ, ದೇವಿಕೊಪ್ಪ, ದುಮ್ಮವಾಡ ಹತ್ತಿರ ೪ ಕೆ. ಬಿ ಗ್ರೇಡ್ ಸ್ಥಾಪನೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೂಡಲೇ ಸಚಿವರು ಹೆಸ್ಕಾಂ ಇಲಾಖೆ ಕಾರ್ಯದರ್ಶಿ ಗೌರವಗುಪ್ತಾ ಅವರಿಗೆ ದೂರವಾಣಿ ಕರೆ ಮಾಡಿ ಕೆ. ಬಿ ಗ್ರೇಡ್ ಅನುಮೋದನೆ ನೀಡಲು ತಿಳಿಸಿದರು.
ಪಟ್ಟಣದಲ್ಲಿ ನೀರಿನ ಸಮಸ್ಯೆ ಪಟ್ಟಣದಲ್ಲಿ ೧೦ ದಿನಕೊಮ್ಮೆ ನೀರು ಪೂರೈಸುವದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಪಟ್ಟಣದ ಮುಖಂಡ ಶಶಿಕುಮಾರ್ ಕಟ್ಟಿಮನಿ ಸಭೆಯಲ್ಲಿ ತಿಳಿಸಿದರು.
ಪಟ್ಟಣಕ್ಕೆ ನೀರು ಪೂರೈಸುವ ಬೆನಚಿ ಕೆರೆಯಲ್ಲಿ ನೀರಿನ ಮೋಟಾರ್ ಸಣ್ಣ ಪ್ರಮಾಣದಲ್ಲಿದ್ದು ಅದಕ್ಕೆ ನೀರು ಪೂರೈಸಲು ಸಮಸ್ಯೆಯಾಗುತ್ತಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿ. ವಿ ಕುಲಕರ್ಣಿ ತಿಳಿಸಿದರು.
೨೪ ಗಂಟೆ ನೀರಿನ ಕಾಮಗಾರಿ ವಿಳಂಬ ಮಾಡದೇ ಕೆಲಸ ಪೂರ್ಣಗೊಳ್ಳಿಸಬೇಕು. ಮೊದಲು ನೀರಿನ ಮೋಟಾರ್ ಕೂಡಲೇ ಖರೀದಿಸಿ ಜೋಡಣೆ ಮಾಡಬೇಕು ಎಂದು ಅಧಿಕಾರಿ, ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕ ಸರ್ಕಾರಿ ಆಸ್ಪತ್ರೆ ಸುತ್ತ ಮುತ್ತಲು ಸ್ವಚ್ಛತೆ ಕೈಗೊಳ್ಳಬೇಕು ಎಂದು ತಾಲ್ಲೂಕ ಆರೋಗ್ಯಧಿಕಾರಿ ಎನ್. ಬಿ ಕರ್ಲವಾಡ ಅವರಿಗೆ ತಿಳಿಸಿದರು.
ತಾಲ್ಲೂಕಿನ ನೆಲ್ಲಿಹರವಿ ತಾಂಡಾ ನಿವಾಸಿಗಳಿಗೆ ಸಚಿವರು ಮನೆಯ ಹಕ್ಕು ಪತ್ರ ವಿತರಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಎಸ್ಪಿ ಗೋಪಾಲ್ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ಶುಭಂ, ಎಸ್.ಆರ್ ಪಾಟೀಲ, ಶುಭಾ ಪಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ, ಶಿವಲಿಂಗಪ್ಪ ಯಲಿವಾಳ, ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ, ತಹಸೀಲ್ದಾರ ವಿರೇಶ ಮುಳಗುಂದಮಠ,ಹರಿಶಂಕರ್ ಮಠದ, ಸೋಮಶೇಖರ್ ಬೆನ್ನೂರ್, ಬಾಳು ಖಾನಾಪುರ,ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶಶಿಕುಮಾರ ಕಲಘಟಗಿ




