Ad imageAd image

ದಾರ್ಶನಿಕ ಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ಕನಕದಾಸರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ ವೈ ಗೋಪಾಲಕೃಷ್ಣ.

Bharath Vaibhav
ದಾರ್ಶನಿಕ ಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ಕನಕದಾಸರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ ವೈ ಗೋಪಾಲಕೃಷ್ಣ.
WhatsApp Group Join Now
Telegram Group Join Now

ಮೊಳಕಾಲ್ಮೂರು:-ಭಕ್ತ ಕನಕದಾಸರು ತತ್ವ ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎನ್ ವೈ ಗೋಪಾಲಕೃಷ್ಣರವರು ತಿಳಿಸಿ.ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಭಕ್ತ ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ ಅವರ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿ ನೆಮ್ಮದಿಯ ತಳಪಾಯ ಹಾಕಿದ ಮಹಾನ್ ಪುರುಷ ಜೀವನ ಆಧ್ಯಾತ್ಮಿಕ ಸಾಮಾಜಿಕ ಭಾವನಾತ್ಮಕ ಅಸ್ಪೃಶ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಅವರ ಕೀರ್ತನೆಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ ಮಹಾನ್ ಪುರುಷ, ಕುಲ ಕುಲ ಕುಲವೆಂದು ಒಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಜನಸಾಮಾನ್ಯರಲ್ಲಿನ ಜಾತಿ ಧರ್ಮಗಳನ್ನು ತೊಲಗಿಸುವ ತ್ಯಾಗ ಜೀವನ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮಹಾನ್ ಸಂತ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಾ ರಸಾ ಮತ್ತು ವೈನ್ ಮಂಡಳಿಯ ಅಧ್ಯಕ್ಷರಾದ ಡಾ ಯೋಗೇಶ್ ಬಾಬು ಮಾತನಾಡಿ ಭಕ್ತ ಕನಕದಾಸರು ಉತ್ತಮ ಸಮಾಜ ನಿರ್ಮಾಣ ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು, ದಾಸರ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಭಕ್ತ ಕನಕದಾಸರು ಶ್ರೀ ಕೃಷ್ಣ ಪರಮಾತ್ಮನ ತಮ್ಮ ಭಕ್ತಿಯಿಂದ ಬೇಡಿ ಕೃಷ್ಣನ ಆಶೀರ್ವಾದ ಪಡೆದ ವ್ಯಕ್ತಿ ಎಂದರು.

ಅದೇ ರೀತಿ  ಕುರುಬರ ಸಂಘದ ತಾಲೂಕು ಅಧ್ಯಕ್ಷರಾದ ಜಗದೀಶ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು ಮತ್ತು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಮತ್ತು ಸಮಾಜದ ಮುಖಂಡರಾದ ಮೂರ್ತಿ ತಮ್ಮ ಹಿತನುಡಿಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಲೀಮುಲ್ಲಾ ಪಟ್ಟರ ಪಂಚಾಯತಿ ನಾಮ ನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಮುಖಂಡರುಗಳಾದ ನಾಗಭೂಷಣ್ ಹೆಜ್ಜೇನಳ್ಳಿ ನಾಗರಾಜ್ ಶಿಕ್ಷಕರಾದ ಓಬಣ್ಣ ಪಿಎಸ್ಐ ಪಾಂಡುರಂಗಪ್ಪ ಸಮಾಜದ ಮುಖಂಡರು ಮತ್ತು ನಾನ ಇಲಾಖೆ ಅಧಿಕಾರಿಗಳು ಇನ್ನೂ ಹಲವಾರು ಪ್ರಸ್ತುತರಿದ್ದರು.

ವರದಿ :-ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!