ನಿಪ್ಪಾಣಿ :- ಬೇಡಕಿಹಾಳ ಗ್ರಾಮದ ಜಾಗೃತ ದೇವಸ್ಥಾನ ಸಿದ್ದೇಶ್ವರ ಮಂದಿರದಲ್ಲಿ ಶ್ರೀ ಕಲ್ಯಾಣ ಸಿದ್ದೇಶ್ವರ ಯೂಥ್ ಫೌಂಡೇಶನ್ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ರವಿವಾರ ಸಂಜೆ 5111 ಹಣತೆಗಳನ್ನು ಹಚ್ಚಿ ದೀಪೋತ್ಸವ ಆಚರಿಸಲಾಯಿತು.ಕತ್ತಲೆಯ ಮಧ್ಯೆ ಝಗಮಗಿಸುವ ದೀಪಗಳ ಸಾಲು,ಶ್ರೀರಾಮ, ಶಿವ ಪಾರ್ವತಿ,ಸೇರಿದಂತೆ ಅನೇಕ ರಂಗೋಲಿಗಳ ಚಿತ್ತಾರ,ಆಕಾಶದಲ್ಲಿ ಸ್ಫೋಟಿಸುವ ಸಿದಿಮದ್ದಿನ ಚಿತ್ತಾರಗಳು. ಏತನಮದ್ಯೆ ದೀಪದಿಂದ ದೀಪವ ಹಚ್ಚ ಬೇಕು ಮಾನವ ಎಂಬ ಭಕ್ತಿ ಗೀತೆಯ ನೀನಾದ ನಡುವೆ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಸಿದ್ದೇಶ್ವರ ಮಂದಿರದಲ್ಲಿಯ ಮಹಾದೇವ ಮಂದಿರ, ನರಸಿಂಹ ಸ್ವಾಮಿ ಮಂದಿರ, ದರ್ಗಾ ಕಟ್ಟೆ,ಪಲ್ಲಕ್ಕಿ ಮನೆ, ಪಲ್ಲಕ್ಕಿ ಕಟ್ಟೆ ಸೇರಿದಂತೆ ಸಂಪೂರ್ಣ ಮಂದಿರದಲ್ಲಿ 200ಕೆಜಿ ಗೂ ಅಧಿಕ ಚೆಂಡು ಹೂಗಳಿಂದ ಶೃಂಗಡಿಸಲಾಗಿತ್ತು. ಕಲ್ಯಾಣ್ ಸಿದ್ದೇಶ್ವರ ಫೌಂಡೇಶನ್ ಸದಸ್ಯರಿಂದ ಮಂದಿರದ ಎದುರು ಸ್ವಸ್ತಿಕ ಮತ್ತು ವಿವಿಧ ಕಲಾ ಕೃತಿಗಳ ಮಧ್ಯೆ ವಿದ್ಯುತ್ ದ್ವೀಪಗಳ ಅಲಂಕಾರ ಮಾಡಲಾಗಿತ್ತು. ಒಟ್ಟು 5 111 ದೀಪಗಳಿಂದ ಮಂದಿರ ತುಂಬಾ ಬೆಳಗಲಾಗಿತ್ತು. ರಾತ್ರಿ 8.30 ಕ್ಕೆ ಪುಷ್ಪಗಳಿಂದ ಅಲಂಕೃತ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಶಮನೆವಾಡಿ, ನೇಜ, ಸದಲಗಾ,ಗಳತಗಾ, ಭೋಜ ಗ್ರಾಮಗಳಿಂದ ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡು ಸಿದ್ದೇಶ್ವರ ದರ್ಶನ ಪಡೆದು ಪುನೀತರಾದರು.
ವರದಿ:- ಮಹಾವೀರ ಚಿಂಚಣೆ.