ನವದೆಹಲಿ : ವಿಶ್ವಪ್ರಸಿದ್ಧ ಮೆಟಾ ಸಂಸ್ಥೆಗೆ ಭಾರತ ದೊಡ್ಡ ಮಟ್ಟದ ದಂಡ ಹಾಕಿದೆ. ವಾಟ್ಸಾಪ್ ನ 2021 ರ ಪ್ರೈವೆಸಿ ಪಾಲಿಸಿ ಅಪ್ಡೇಟ್ ವಿಚಾರವಾಗಿ 213.14ಕೋಟಿ ರೂ ಫೈನ್ ಹಾಕಿದೆ.
2021 ರ ಅಪ್ಡೇಟ್ ನಲ್ಲಿ ಬಳಕೆದಾರರು ತಮ್ಮ ಪೂರ್ತಿ ಡಾಟಾ ಹಂಚಿಕೊಳ್ಳೋದು ಕಡ್ಡಾಯವಾಗಿದೆ.ಮೊಬೈಲ್ ನಲ್ಲಿರುವ ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಳ್ಳುವ ವೇಳೆ ಬಳಕೆದಾರರು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ.
ಇದು ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ದಂಡ ವಿಧಿಸಿರುವ ಕಾಂಪಿಟೇಷನ್ ಕಮಿಷನ್ ಅಭಿಪ್ರಾಯಪಟ್ಟಿದೆ. ಅಲ್ಲದೆ ಬಳಕೆದಾರರ ಡಾಟಾ ವನ್ನ 5 ವರ್ಷ ಜಾಹೀರಾತು ಕಂಪನಿಗಳಿಗೆ ಶೇರ್ ಮಾಡದಂತೆಯೂ ಮೆಟಾಗೆ ಖಡಕ್ ಸೂಚನೆ ನೀಡಲಾಗಿದೆ.
ಮೆಟಾ ಸಂಸ್ಥೆ ಮಾರುಕಟ್ಟೆಯಲ್ಲಿರೋ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ನ ಸ್ಪರ್ಧೆಯನ್ನ ನಿಭಾಯಿಸಲು ಅನೈತಿಕ ಮಾರ್ಗ ಅನುಸರಿಸಿದೆ ಎಂದು ಕಾಂಪಿಟೇಷನ್ ಕಮಿಷನ್ ಹೇಳಿಕೊಂಡಿದೆ.