ಅಥಣಿ : ಇನ್ನು ಅದೆಷ್ಟು ಅವಮಾನಗಳನ್ನು ಸಹಿಸಿಕೊಳ್ಳೊದು ಅಂತಿದ್ದಾರೆ ಗಡಿ ಕನ್ನಡಿಗರು.
ಅಥಣಿ ತಾಲೂಕಾ ಆಡಳಿತ ವಿರುದ್ಧ ಸ್ಥಳೀಯರು ಗರಂ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ – 2025 ರ ವೀರ ಜ್ಯೋತಿ ಯಾತ್ರೆ ಸ್ವಾಗತಕ್ಕೆ ಆಗಮಿಸದ ಅಧಿಕಾರಿಗಳು.ಅಥಣಿ ತಾಲೂಕಾ ಆಡಳಿತ ಅಧಿಕಾರಿಗಳಿಗೆ ಚಳಿ ಬಿಡಿಸಿದ ಕನ್ನಡ ಪರ ಸಂಘಟನೆಗಳು.
ಅಥಣಿ ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ ಕರವೇ ಕಾರ್ಯಕರ್ತರು.
ಅಥಣಿ ತಾಲೂಕಾಡಳಿತ ವಿರುದ್ಧ ಘೋಷಣೆ, ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕನ್ನಡಿಗರ ಆಗ್ರಹ.
ವರದಿ : ಸುಕುಮಾರ ಮಾದರ