ಮೈಸೂರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹ್ಮದ್ ಅವರು ಕರಿಯ ಕುಮಾರಸ್ವಾಮಿ ಎಂದು ಹೇಳಿಕೆ ನೀಡಿದ್ದರಿಂದ ಹೊತ್ತಿಕೊಂಡ ಕಿಡಿಯು ಇನ್ನೂ ತಣ್ಣಗಾಗಿಲ್ಲ.
ಇದರ ನಡುವೆಯೇ ಕಾಂಗ್ರೆಸ್ನ ನಾಯಕಿ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಜಮೀರ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಜಮೀರ್ ಅವರು ಕರಿಯ ಅಂದ್ರೆ ತಪ್ಪಾಗುತ್ತೆ ಎನ್ನುವುದಾದರೆ, ಅದೇ ರಾಧಿಕಾ ಕುಮಾರಸ್ವಾಮಿ ಅವರು ಕರಿಯ, ಚಿನ್ನು ಅಂತಾ ಕರೆದರೆ ತಪ್ಪಾಗಲ್ವಾ ಎನ್ನುತಾ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಯಾವುದೋ ಒಂದು ಸಂದರ್ಶನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರನ್ನು ಏನಂತಾ ಕರಿತೀರಾ ಎಂಬ ಪ್ರಶ್ನೆಗೆ .. ಚಿನ್ನು ಅಂತಾ ಕರೀತಿನಿ…ಮತ್ತೇನು ಅಂತಾ ಕರಿತೀರಿ.. ಕರಿಯ ಅಂತಾ ಕರಿತೀನಿ ಅಂತಾ ಹೇಳಿದ್ದು ಮಾಧ್ಯಮದಲ್ಲಿ ನೋಡಿರುವುದಾಗಿ ತೇಜಸ್ವಿನಿಗೌಡ ಅವರು ಹೇಳಿದ್ದಾರೆ. ಈ ಅವರ ಹೇಳಿಕೆ ಇದೀಗ ಮಗದೊಮ್ಮೆ ರಾಜಕೀಯ ತಿಕ್ಕಾಟ ಆರಂಭಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.