ಸಿಂಧನೂರು : ಶಂಭು ಗಡಿಯಲ್ಲಿ ಅಮರಣಾಂತರ ಸತ್ಯಾಗ್ರಹ ಕುಳಿತಿರುವ ಜಗತ್ ಸಿಂಗ್ ದಲೈವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದು ಈಗಾಗಲೇ ಧರಣಿ ನಿರತ ಇಬ್ಬರು ರೈತರು ಸಾವನ್ನಪ್ಪಿದ್ದು ಇವರ ಹೋರಾಟವನ್ನು ಗಂಭೀರವಾಗಿ ಪರಿಣಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾ 9 ಜನವರಿ 2025 ರಂದು ಅಖಿಲ ಭಾರತ ಹಕ್ಕೋತ್ತಾಯ ದಿನವೆಂದು ರಾಷ್ಟ್ರ ವ್ಯಾಪ್ತಿ ಆಚರಿಸುತ್ತಿರುವ ಕುರಿತು ಮಾನ್ಯ ತಸಿಲ್ದಾರರ ಮುಖಾಂತರ ಸನ್ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸುಲ್ಲಿಸಿ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಈ ಹಸಿ ಸುಳ್ಳುಗಳನ್ನು ಕೆದಕುತ್ತ ಹೋದರೆ ಕಟು ವಾಸ್ತವದ ನಿರ್ದೇಶನವಾಗುತ್ತದೆ ಕೃಷಿ ಕಾರ್ಮಿಕರು ಅಸಂಘಟಿತ ಐಸಿಡಿಎಸ್ ಮಧ್ಯಾಹ್ನ ಊಟದ ಕಾರ್ಮಿಕರ ವೇತನವನ್ನು 5 ಪಟ್ಟು ಹೆಚ್ಚಿಸಲಾಗಿದೆ ,? ಇಲ್ಲ 2014 ರಿಂದ 2024ರ ವರೆಗೆ ಕೃಷಿ ಕಾರ್ಮಿಕರ ನೈಜ ವೇತನವು ಪ್ರತಿ ವರ್ಷ 1.3 ಪ್ರತಿ ಶತದಷ್ಟು ಕಡಿಮೆಗೊಳಿಸಲಾಗಿದೆ ಇದು ನಾವು ನೀವು ಅಂಕಿ ಅಂಶಗಳು ಆಗದ್ರೆ ಕೃಷಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆ ಎಂಎಸ್ಪಿ. ವಿಷಯದಲ್ಲಿ 5 ಪಟ್ಟು ಹೆಚ್ಚಿಸಲಾಗಿದೆಯೇ? ಇಲ್ಲ.
ಮೋದಿಯವರ ಆಡಳಿತ ಸರ್ಕಾರ ವಿದೇಶಿ ಕಾರ್ಪೊರೇಟರ್ ಕಂಪನಿಗಳು ಗ್ರಾಮೀಣ ಶ್ರೀಮಂತ ವಿಭಾಗಗಳಿಂದ ಮಾರುಕಟ್ಟೆ. ಬೀಜದ ಸಂಪೂರ್ಣ ನಿಯಂತ್ರಣವಾಗಿದೆ “ಕೃಷಿ ಮಂತ್ರಾಲಯ ನೀಡಿದ ಜಾಹೀರಾತು’ ದೇಶದ ರೈತರನ್ನು ಭಾರತ್ ಕಾ ಭಾಗ್ಯ ವಿಧಾತ್ ಎಂದು ಕರೆದಿದೆ ಹಾಗೆ ಹೇಳುತ್ತದೆ ರೈತರ ನ್ಯಾಯಯುತ ಹಕ್ಕುಗಳನ್ನು ಕಸಿದು ಕೊಂಡಿದೆ ದೇಶದ ದುಡಿಯುವ ವರ್ಗ ನಿತ್ಯ ಸಂಕಷ್ಟಗಳ ಸರಮಾಲೆಯಲ್ಲಿ ಬದುಕುತ್ತಿದ್ದರು ಬಿಜೆಪಿ ಮತ್ತು ಸಂಘ ಪರಿವಾರ ವಿಕಾಸಿತ ಭಾರತ ಎಂದು ಕೇಕೆ.. ಹಾಕುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದರು.
ಈ ಸಂದರ್ಭದಲ್ಲಿ- ಬಿ ಎನ್. ಯಾರದಿಹಾಳ ಜಿಲ್ಲಾ ಕಾರ್ಯದರ್ಶಿ, ರಮೇಶ್ ಪಾಟಿಲ್ ಬೇರಗಿ ತಾಲೂಕಾಧ್ಯಕ್ಷರು, ಯಲ್ಲಪ್ಪ ಭಜಂತ್ರಿ ತಾಲೂಕ ಕಾರ್ಯದರ್ಶಿ, ವೆಂಕಟೇಶ್ ಉದ್ಬಾಳ, ಎಂ ಗಂಗರಾಜ್ ಶಾಂತಿನಗರ, ಪ್ರಸಾದ್ ಸುಕಲಪೇಟೆ, ನಿಂಗಪ್ಪ ಬೀರಗಿ, ಶ್ಯಾಮಿದ ಸಾಬ್ ಗುಂಜಳ್ಳಿ ಕ್ಯಾಂಪ್, ವೆಂಕಟೇಶ್ ಕರ್ನಿ, ಹನುಮಂತ ಗೋಮರ್ಸಿ, ಬಸಪ್ಪ ಕೋಣದ, ವೀರೇಶ್ ಭಜಂತ್ರಿ, ಶಿವು ಚಲವಾದಿ ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ