Ad imageAd image

ವೈಕುಂಠ ಏಕಾದಶಿ ಪ್ರಯುಕ್ತ ನಡುವಲಕೋಟೆ ಹನುಮಂತರಾಯನಿಗೆ ವಿಶೇಷ ಅಲಂಕಾರ

Bharath Vaibhav
ವೈಕುಂಠ ಏಕಾದಶಿ ಪ್ರಯುಕ್ತ ನಡುವಲಕೋಟೆ ಹನುಮಂತರಾಯನಿಗೆ ವಿಶೇಷ ಅಲಂಕಾರ
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ 12 ನೇ ವಾರ್ಡ್ನಲ್ಲಿ ವಿರಾಜಮಾನವಾಗಿರುವ ಶ್ರೀ ನಡುವಲಕೋಟೆ ಹನುಮಂತರಾಯಸ್ವಾಮಿ ದೇವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ವೈಕುಂಠ ಏಕಾದಶಿಯ ಪ್ರಯುಕ್ತ ಇಂದು ಬೆಳಿಗ್ಗೆ ಸ್ವಾಮಿಯವರಿಗೆ ವಿಶೇಷ ಅಭಿಷೇಕ, ಪೂಜೆ, ಅಷ್ಟೋತ್ತರ, ಸಹಸ್ರನಾಮಾರ್ಚನೆ ಸಲ್ಲಿಸಲಾಯಿತು. ಹನುಮಾನ್ ಚಾಲೀಸ್ ಪಠಣೆ ಮಾಡಲಾಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ದರ್ಶನ ಪಡೆದು ಕೃತಾರ್ಥರಾದರು.

ನಡುವಲಕೋಟೆ ಹನುಮಂತರಾಯ ಸ್ವಾಮಿ ದೇವಾಲಯವು ತುರುವೇಕೆರೆ ಪಟ್ಟಣ ನಿರ್ಮಾಣಕ್ಕೂ ಮೊದಲೇ ಹೊಯ್ಸಳರ ಕಾಲದಲ್ಲಿ ಸ್ಥಾಪಿತವಾದ ದೇವಾಲಯವಾಗಿದೆ. ಹೊಯ್ಸಳರ ಕಾಲದಲ್ಲಿ ಸಾಮಂತ ರಾಜರಾಗಿದ್ದವರು ಈ ದೇವಾಲಯವನ್ನು ಕಟ್ಟಿಸಿದರು ಎನ್ನಲಾಗಿದೆ. ತುರುವೇಕೆರೆಯು ಧೇನುಪುರಿ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದು ಜಲಕೋಟೆಯಾಗಿತ್ತು ಎಂಬ ಉಲ್ಲೇಖ ಇತಿಹಾಸದಲ್ಲಿ ದಾಖಲಾಗಿದೆ.

ವ್ಯಾಸ ಮಹರ್ಷಿಗಳು ಈ ಹನುಮಂತರಾಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸ್ವಾಮಿಯು ದಕ್ಷಿಣಾಭಿಮುಖವಾಗಿದ್ದು, ಬಾಲದಲ್ಲಿ ಘಂಟೆಯಿದೆ, ಸೊಂಟದ ಭಾಗದಲ್ಲಿ ಸೌಗಂಧಿಕಾ ಪುಷ್ಪವಿರುವುದನ್ನು ಕಾಣಬಹುದಾಗಿದೆ. ಅಭಯ ಹಸ್ತವಿರುವ ಈ ಹನುಮಂತರಾಯ ಸ್ವಾಮಿಯು ಶೀಘ್ರ ವರಪ್ರಸಾದ ನೀಡುವವನಾಗಿದ್ದು, ಸ್ವಾಮಿಯನ್ನು ಕಾಣಲು ಭಕ್ತರು ದೂರದ ಊರುಗಳಿಂದ ಬರುತ್ತಾರೆ.

ವರದಿ: ಗಿರೀಶ್ ಕೆ ಭಟ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!