ನಿಡಗುಂದಿ : ಅಖಂಡ ಕರ್ನಾಟಕ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲಾ ಕಾಲುವೆಗೆ ಕೂಡಲೇ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಮುಖ್ಯ ಅಭಿಯಂತರರು ಕೃಷ್ಣ ಭಾಗ್ಯ ಜಲ ನಿಗಮ ಡಿ ಬಸವರಾಜ್ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದರು. ಬೆಳೆಗಳಿಗೆ ನೀರಿಲ್ಲದೆ ಹಾನಿಯಾಗುತ್ತಿದೆ, ಹಂಗಾಮಿನ ಬೆಳೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು.
ಕಳೆದ ನವೆಂಬರ್ ತಿಂಗಳಲ್ಲಿ ಅಂದರೆ 2024-25ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡಲು ನವೆಂಬರ್ 1 ರಂದು ಆಲಮಟ್ಟಿಯ ಎಮ್.ಡಿ. ಕಛೇರಿಯಲ್ಲಿ ನಡೆದ ಐ.ಸಿ.ಸಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು.
14 ದಿನ ನೀರು ಹರಿಸುವುದು 10 ದಿನ ಬಂದ್ ಇಡುವ ವಾರಾಬಂದಿ ಪದ್ಧತಿ ಅನುಸರಿಸಿ ಮಾರ್ಚ್ ವರೆಗೆ ನೀರು ಹರಿಸಲಾಗುವುದೆಂದು ಸಭೆಯಲ್ಲಿ ಅಬಕಾರಿ ಸಚಿವರು ಹಾಗೂ ಐಸಿಸಿ ಸಭೆಯ ಅಧ್ಯಕ್ಷರಾದ ಆರ್.ಬಿ. ತಿಮ್ಮಾಪೂರ ಸಭೆಯಲ್ಲಿ ವಿವರಿಸಿದರು.
ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ, ಸಭೆಯಲ್ಲಿ ನಿರ್ಣಯವಾದರೂ ಕೂಡ ನೀರು ಬಿಡಲು ಹಿಂದೇಟು,ರೈತರಿಗೆ ದ್ರೋಹ ಮಾಡುವ ಕೆಲಸ, ಮಲತಾಯಿ ಧೋರಣೆಯನ್ನು ಮಾಡದೆ ಕೂಡಲೇ ರೈತರ ನೋವನ್ನು ಅರಿತು, ಕಾಲುಗಳಿಗೆ ನೀರು ಹರಿಸಬೇಕು.
ರೈತರನ್ನು ನಿರ್ಲಕ್ಷಿಸಿ ಕಾಲುವೆಗಳಿಗೆ ನೀರು ಹರಿಸಿದೆ ಇದ್ದಲ್ಲಿ ಮುಂದಿನ ದಿನಮಾನದಲ್ಲಿ ಸೋಮವಾರದಿಂದ ನಾವು ಉಗ್ರವಾದ ಪ್ರತಿಭಟನೆಯನ್ನು ಮಾಡಬಹುದಾಗಿ ರೈತ ಸಂಘದ ಅಧ್ಯಕ್ಷ ಅರವಿಂದ್ ಕುಲಕರ್ಣಿ ಹೇಳಿದರು.
ರೈತರರಾದ ವಿಠ್ಠಲ್ ಬಿರಾದಾರ್, ಹನುಮಂತ ಗುಣಕಿ, ಉಮೇಶ್ ವಾಲಿಕಾರ್, ಶಿವಣ್ಣ ನಾಗರೆಡ್ಡಿ, ಯಮನಪ್ಪ ಮಾದರ್, ಇನ್ನು ಅನೇಕ ರೈತರು ಮನವಿ ಸಲ್ಲಿಸಿದರು.
ವರದಿ:ಅಲಿ ಮಕಾನದಾರ