ನಿಪ್ಪಾಣಿ: ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ರಾಜಮಾತಾ ಜೀಜಾವು ಮಹಿಳಾ ಸಹಕಾರ ಸಂಘ ಹಾಗೂ ದತ್ತ ಕುಮಾರ್ ಪಾಟೀಲ್ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಜನವರಿ 12ರಂದು ರಾಜಮಾತಾ ಜಿಜಾವು ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭಗಳು ಜರುಗಲಿವೆ. ಎಂದು ರಾಜಮಾತಾ ಜಿಜಾವು ಮಹಿಳಾ ಸಂಘದ ಅಧ್ಯಕ್ಷೆ ಸುಪ್ರಿಯಾ ದತ್ತಕುಮಾರ ಪಾಟೀಲ್ ತಿಳಿಸಿದರು. ಅವರು ಮಹಿಳಾ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು ಬೇಡಕಿಹಾಳದ ಛತ್ರಪತಿ ಶಿವಾಜಿ ಪೇಟೆಯಲ್ಲಿ ಮಹಿಳೆಯರಿಗಾಗಿ ಅಂತಾಕ್ಷರಿಸ್ಪರ್ಧೆ ಏಕಪಾತ್ರಾಭಿನಯ ಹಾಗೂ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ. ಮತ್ತು ಸಂಘದ ವತಿಯಿಂದ ಕಲೆ ಕ್ರೀಡೆ ಸಾಮಾಜಿಕ ಕ್ಷೇತ್ರಗಳಲ್ಲಿ ಯ ಪ್ರತಿಭಾನ್ವಿತ ಮಹಿಳೆಯರಿಗಾಗಿ ನೀಡಲಾಗುತ್ತಿರುವ 5 ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ.
ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಜಾತ ಖೋತ್ ಚಿಕ್ಕೋಡಿ ಅರ್ಬನ್ ಬ್ಯಾಂಕಿನ ಸಂಚಾಲಕಿ ಡಾಕ್ಟರ್ ಅಪರ್ಣ ಕಸ್ತೂರಿ, ಉಜ್ವಲಾ ಪಾಟಿಲ ಭಾಗವಹಿಸಲಿದ್ದು ಕಲ್ಯಾಣಿ ಸುರೇಶ್ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸುತ್ತಲಿನ ಗ್ರಾಮಗಳ ಮಹಿಳೆಯರು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಮೇಘಾ ಪಾಟೀಲ್ ಸ್ನೇಹಲ ಸಂಕಪಾಳ ಸುಜಾತಾ ಪೋತದಾರ, ಶುಭಾಂಗಿ ಪಾಟೀಲ ಸಾಕ್ಷಿ ಪಾಟೀಲ್ ಭಾವನಾ ಇನಾಮದಾರ, ಸಾಧನಾ ದೇಸಾಯಿ ಉಪಸ್ಥಿತರಿದ್ದರು ಪ್ರಿಯಾಂಕಾ ಪಾಟೀಲ ಸ್ವಾಗತಿಸಿ ದರು ಕವಿತಾ ಜನವಾಡೆ ವಂದಿಸಿದರು.
ವರದಿ:ಮಹಾವೀರ ಚಿಂಚನೆ