Ad imageAd image

ಪ್ರವಾಸಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಇನ್ಶೂರೆನ್ಸ್ : ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ

Bharath Vaibhav
ಪ್ರವಾಸಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಇನ್ಶೂರೆನ್ಸ್ : ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ
WhatsApp Group Join Now
Telegram Group Join Now

ಪಾವಗಡ :‌ ಪ್ರವಾಸಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಇನ್ಶೂರೆನ್ಸ್ ಮಾಡಿಸಲಾಗಿದ್ದು, ಈ ಮಕ್ಕಳ ಜವಾಬ್ದಾರಿಗೆ ನಾಲ್ಕು ಜನ ಶಿಕ್ಷಕರನ್ನು ಕಳಿಸುತ್ತಿದ್ದೇವೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಇಂದ್ರಾಣಮ್ಮ ತಿಳಿಸಿದರು.

ಪಟ್ಟಣದ ಗುರುಭವನದ ಮೈದಾನದಲ್ಲಿ ಶುಕ್ರವಾರ ಸರ್ಕಾರದ ವತಿಯಿಂದ ಪ್ರವಾಸಕ್ಕೆ ತೆರಳುವ ತಾಲ್ಲೂಕಿನ ಪ್ರೌಢಶಾಲೆಯ ಎಂಟನೇ ಮತ್ತು 9ನೇ ತರಗತಿಯ ಮಕ್ಕಳ ವಾಹನಗಳಿಗೆ ಚಾಲನೆ ನೀಡಿ ನಂತರ ಅವರು ಮಾತನಾಡುತ್ತಾ, ತಾಲ್ಲೂಕಿನ ಎಂಟನೇ ತರಗತಿ ಮತ್ತು 9ನೇ ತರಗತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು96 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಇದರಲ್ಲಿ ಪರಿಶಿಷ್ಟ ಜಾತಿ 54 ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡ 42 ವಿದ್ಯಾರ್ಥಿಗಳು ಇದ್ದು ಈ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನಾಲ್ಕು ಜನ ಶಿಕ್ಷಕರು ನೋಡಿಕೋಳ್ಳಲಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನದ ಪ್ರವಾಸ ಇದಾಗಿರುತ್ತದೆ. ಪ್ರವಾಸ ಮಗಿದ ನಂತರ ಮತ್ತೆ ಗುರು ಭವನ ಪಕ್ಕದ ಮೈದಾನದೊಳಕ್ಕೆ ಪೋಷಕರನ್ನು ಕರೆಯಿಸಿ ಅವರ ಜವಾಬ್ದಾರಿಗೆ ಮಕ್ಕಳನ್ನು ಒಪ್ಪಿಸುತ್ತೇವೆ ಎಂದು ತಿಳಿಸಿದರು,

ಸಿ ಆರ್ ಪಿ ವೆಂಕಟೇಶ್ ರವರು ಮಾತನಾಡುತ್ತಾ , ಭಾರತದ ಇತಿಹಾಸದ ಸಂಬಂಧಪಟ್ಟಂತಹ ಸರ್ಕಾರ ಎಸ್ಸಿ ಎಸ್ಟಿ ಬಡ ಮಕ್ಕಳಿಗೆ ಈ ಸಮುದಾಯದಲ್ಲಿ ಹಿಂದುಳಿದಂತಹ ಮಕ್ಕಳಿಗೆ ಸರ್ಕಾರದಿಂದ ಬರುವಂತಹ ಬ್ಯಾಗು ಮತ್ತು ಟೀ ಶರ್ಟ್ ಪ್ರವಾಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅಗತ್ಯವಾದ ವಸ್ತುಗಳನ್ನು ನೀಡಿದೆ, ಪೋಷಕರು ಎಷ್ಟೋ ಜನ ಮಕ್ಕಳಿಗೆ ಪ್ರವಾಸಕ್ಕೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಆದರೆ ಸರ್ಕಾರ ಈ ಅನುಕೂಲ ಮಾಡಿರುವುದರಿಂದ ಮಕ್ಕಳು ಮತ್ತು ಪೋಷಕರು ತುಂಬಾ ಸಡಗರದಿಂದ ಬಂದು ಮಕ್ಕಳಿಗೆ ಪ್ರೋತ್ಸಾಹ ನೀಡಿ ಸಂತೋಷ ವ್ಯಕ್ತಪಡಿಸಿದರು
ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಚಂದ್ರಶೇಖರ್ ಎಂ ಇಸಿಓ, ವೇಣುಗೋಪಾಲ ರೆಡ್ಡಿ ಡಿಆರ್ ಇಸಿಓ, ನಟರಾಜ್ ಪಿ ಆರ್ ಶಿಕ್ಷಕರು ಜಿ ಜೆ ಸಿ (ಎಚ್ ಎಸ್) ಪಾವಗಡ ಟೌನ್, ಸೋಮಶೇಖರ್ ದೈಹಿಕ ಶಿಕ್ಷಕರು, ವಿಶಾಲ ಸಿ ಆರ್ ಪಿ, ಶಿವಗಂಗಮ್ಮ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು,

ವರದಿ: ಶಿವಾನಂದ ಪಾವಗಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!