ಹಿರೇಬಾಗೇವಾಡಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಕೆಇಬಿ ಸ್ಟೇಷನ್ ನಿಂದ ಬೆಂಡಿಗೇರಿ ಗ್ರಾಮದವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸುಮಾರು 3.22 ಕೋಟಿ ರೂ,ಗಳ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ನಡೆಯಲಿದ್ದು, ಸ್ಥಳೀಯರ ಸಲಹೆ ಸೂಚನೆ ಪಡೆದು, ನಿಗದಿತ ಸಮಯದಲ್ಲಿ ರಸ್ತೆ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಚನ್ನರಾಜ ಹಟ್ಟಿಹೊಳಿ ಸೂಚಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಜಪ್ತಿ, ಉಪಾಧ್ಯಕ್ಷರಾದ ಶ್ರುತಿ ಸಿದ್ದಣ್ಣವರ, ಅಡಿವೇಶ ಇಟಗಿ, ಆನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ.ಪಾಟೀಲ, ಪ್ರಕಾಶ ಜಪ್ತಿ, ಮಲ್ಲಪ್ಪ ಹುಲಿಕವಿ, ಆರ್.ಅಭಿಲಾಷ್, ಈರಣಗೌಡ ಪಾಟೀಲ, ರವಿ ಮೇಳೆದ್, ಅನಿಲ ಪಾಟೀಲ, ಇಮ್ತಿಯಾಜ್ ಕರಿದಾವಲ್, ಪಡಿಗೌಡ ಪಾಟೀಲ, ಅಡಿವೆಪ್ಪ ತೋಟಗಿ, ವಾಯ್.ಸಿ.ಪಾಟೀಲ, ಸಲೀಂ ಸತ್ತಿಗೇರಿ ಉಪಸ್ಥಿತರಿದ್ದರು.
ವರದಿ: ಪ್ರತೀಕ್ ಚಿಟಗಿ