ಶ್ರೀ ಕಾಡಸಿದ್ದೇಶ್ವರ ಸಭಾಭವನ ಬಸ್ತವಾಡ ಗ್ರಾಮದಲ್ಲಿ ನಡೆದ ಹುಕ್ಕೇರಿ ಶಹರದಲ್ಲಿರುವ ರಾಷ್ಟ್ರಿಕೃತ ಬ್ಯಾಂಕ ಆದ ಕೆನರಾ ಬ್ಯಾಂಕಿನ ಸಿಬ್ಬಂದಿ ಹಾಗೂ ಮೇಲಿನ ವರಿಷ್ಟರ ನೇತೃತ್ವದಲ್ಲಿ
ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು ಸಮಗ್ರ ಕೃಷಿ ಸಾಲ, ಗೃಹ ಸಾಲ, ವಾಹನ ಸಾಲ, ಹೈನುಗಾರಿಕೆ ಸಾಲ, ಉದ್ಯೋಗ ಸಾಲ ಹೀಗೆ ಹಲವು ಸಾಲಗಳ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮತ್ತು ಬ್ಯಾಂಕಿನ ಹೆಚ್ಚಿನ ಸವಲತ್ತುಗಳ ಬಗ್ಗೆ ತಿಳಿಯಲಾಯಿತು.
ಮೀನಾಕ್ಷಿ ಸಾಂಘಾವಿ ಸ್ವಾಗತಿಸಿದರು. ರಮೇಶ್ ಜೈಕರ್ ನಿರೂಪಣೆ ಕೆನರಾ ಬ್ಯಾಂಕ್ ಹುಕ್ಕೇರಿ ಮ್ಯಾನೇಜರ್ ಸಾಗರ್ ವಾನಕಡೆ ವಂದಿಸಿದರು ಈ ಸಂದರ್ಭದಲ್ಲಿ ಹುಬ್ಬಳ್ಳಿ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ DGM ಶ್ರೀಮತಿ ವಿಜಯಶ್ರೀ, ಬೆಂಗಳೂರ ಹೆಡ್ ಆಫೀಸ್ ಪ್ರಧಾನ ವ್ಯವಸ್ಥಾಪಕರಾದ ಕೆ ಮಂಜುನಾಥ್, ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಸರ್ಕಲ್ ಆಫೀಸಿನ AGM ಆರ್ ಕೆ ಜಿನ್ನಾ, ಚಿಕ್ಕೋಡಿ ಪ್ರಾದೇಶಿಕ ಕಚೇರಿಯ ಎಜಿಎಂ ಕಾರ್ತಿಕ್ ಕುಮಾರ್,
ಹುಕ್ಕೇರಿ ಶಾಖೆಯ ವ್ಯವಸ್ಥಾಪಕ ಸಾಗರ್ ವಾನಖಡೆ, ಕೆನರಾ ಬ್ಯಾಂಕಿನ ಸಿಬ್ಬಂದಿ, ರೈತ ಬಾಂಧವರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಬ್ಯಾಂಕ್ ಮಿತ್ರರು, ಹಾಗೂ ಸುರೇಶ ಬಾಬುರಾವ ವಂಟಮೂರಿ, ಉಪಾಧ್ಯಕ್ಷರು, ಶ್ರೀ ಕಾಡಸಿದ್ದೇಶ್ವರ ದೇವಸ್ಥಾನ ಕಮಿಟಿ ಬಸ್ತವಾಡ. ನೇಮಣ್ಣಾ ಲ. ಮಗದುಮ್ಮ ನಿರ್ದೇಶಕರು, ಶ್ರೀ ಹರಿಹಂತ ಸೌಹಾರ್ದ ಸಹಕಾರಿ ನಿಯಮಿತ ಹುಲ್ಲೋಳಿ. ಭೀಮಗೌಡ ಶಂಕರಗೌಡ ಪಾಟೀಲ ಅಧ್ಯಕ್ಷರು, ಗ್ರಾಮ ಪಂಚಾಯತಿ ಬಸ್ತವಾಡ. ಅಶೋಕ ಮಲಗೌಡ ಪಾಟೀಲ ಅಧ್ಯಕ್ಷರು, ಪಿಕೆಪಿಎಸ್ ಬಸ್ತವಾಡ. ಅಬ್ದುಲಬೇಗ್ ಲಾಲಬೇಗ ಇನಾಮದಾರ್ ಬಸ್ತವಾಡ ಗ್ರಾಮದ ಮುಖಂಡರು H.L. ಪೂಜೇರಿ, ಶಿಕ್ಷಕರು ಹಾಗೂ ಶ್ರೀ ಹೊಳೆಮ್ಮದೇವಿ ಟ್ರಸ್ಟ್ ಕಮಿಟಿ ಬಡಕುಂದ್ರಿ. ಶ್ರೀಮತಿ ರಾಜಶ್ರೀ ಆನಂದ ಲಕ್ಕುಂಡಿ, ಡೈರೆಕ್ಟರ, ಆದಿ ಆಗ್ರೋ ಇಂಡಸ್ಟ್ರಿ ರಕ್ಷಿ. ಶ್ರೀಮತಿ ಶ್ರೇಯಾ ಸಂಜೀವಕುಮಾರ ಮಗದುಮ್ಮ ಡೈರೆಕ್ಟರ, ಆದಿ ಆಗ್ರೋ ಇಂಡಸ್ಟ್ರಿ ರಕ್ಷಿ. ಮತ್ತು ಬಸ್ತವಾಡ ಗ್ರಾಮದ ಸುತ್ತಮುತ್ತಲಿನ ಗ್ರಾಮದಿಂದ ಬಂದ ಜನರು ಉಪಸ್ಥಿತರಿದ್ದರು
ವರದಿ : ಶಾಂತಿನಾಥ್ ಜಿ ಮಗದುಮ್