Ad imageAd image

ಮುನವಳ್ಳಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್ : 17 ಗಂಭೀರ ಗಾಯ, ಓರ್ವ ಸಾವು 

Bharath Vaibhav
ಮುನವಳ್ಳಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್ : 17 ಗಂಭೀರ ಗಾಯ, ಓರ್ವ ಸಾವು 
ACCIDENT
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ 12 ಜನರು ಪ್ರಯಾಣಿಸಬಹುದಾದ ಒಂದು ಕ್ರೂಸರ್ ವಾಹನದಲ್ಲಿ ಬರೋಬ್ಬರಿ 18 ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಕರೆದೊಯ್ಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಒಬ್ಬ ವೃದ್ಧ ಸಾವನ್ನಪ್ಪಿದ್ದು, ಬಾಕಿ 17 ಮಂದಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿ ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಘಟನೆ ನಡೆದಿದೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಿಂದ ಕೂಲಿ ಕೆಲಸಕ್ಕೆ 18 ಜನರು ತೆರಳಿದ್ದರು. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು.

ಕೂಲಿ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಊರಿಗೆ ಹೋಗುವಾಗ ವಾಹನದ ಬ್ರೇಕ್ ಫೇಲ್ ಆಗಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ.

ಮರಕ್ಕೆ ಡಿಕ್ಕಿಯಾಗಿ ಕ್ರ್ಯೂಸರ್ ಪಲ್ಟಿಗಿದ್ದು, ಈ ಅಪಘಾತದಲ್ಲಿ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. ಜೊತೆಗೆ, 17 ಜನ ಕೂಲಿ ಕಾರ್ಮಿಕರಿಗೂ ಗಂಭೀರ ಗಾಯಗಳಾಗಿವೆ.

ಮೃತ ವೃದ್ಧ ಕಾರ್ಮಿಕನನ್ನು ಕೆಂಚಪ್ಪ ಲಕ್ಷ್ಮಣ ಈರನ್ನವರ (60) ಎಂದು ಗುರುತಿಸಲಾಗಿದೆ. ಡ್ರೈವರ್ ಸೀಟಿನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಈ ವೃದ್ಧ ಕೆಂಚಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ಗಂಭೀರ ಗಾಯಗೊಂಡಿರುವ 17 ಜನರ ಪೈಕಿ 3 ಜನರ ಸ್ಥಿತಿ ಚಿಂತಾಜನಕವಾಗಿದೆ.

ಆದ್ದರಿಂದ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಸ್ಥಳಕ್ಕೆ ಸವದತ್ತಿ ಪೋಲಿಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ವಾಹನದ ಬ್ರೇಕ್ ಫೇಲ್ ಆಗಿದೆ ಎಂದು ಹೇಳಲಾಗುತ್ತಿದ್ದು,

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!