ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಿನಿ ವಿಧಾನಸಭಾ ಆವರಣ ಒಳಗಡೆ ಇರುವ 25 ನೇ ಕೊಠಡಿಯಲ್ಲಿ ಭೂ ಸುರಕ್ಷಾ ಹಾಗೂ ಭೂ ದಾಖಲೆಗಳ ಡಿಜಿಟಲೀಕರಣ ಕಚೇರಿ ಉದ್ಘಾಟನಾ ಸಮಾರಂಭ ಮಾಡಿದ ಸರ್ಕಾರದ ಮುಖ್ಯ ಸಚೇತಕ ಹಾಗೂ ತಾಲೂಕಿನ ಶಾಸಕರಾದ ಅಶೋಕ ಪಟ್ಟಣ ಮಾಡಿದರು.
ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆ ರೆಕಾರ್ಡ್ ರೂಮ್ ಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳು ನಿವಾರಣೆ ಹಳೆಯ ದಾಖಲೆಗಳು ಸಂರಕ್ಷಣೆ ಹಾಗೂ ಕಳುವಾಗಲು ತಿದ್ದಲು ಅಸಾಧ್ಯ ನೇರವಾಗಿ ನೀವು ಇನ್ನು ಮುಂದೆ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ದಾಖಲೆಗಳನ್ನು ನಿಮ್ಮ ಕೈಗೆ ತಲುಪಿಸುವ ಒಂದು ಯೋಜನೆ ಆಗಿದೆ. ಮತ್ತು ನೂರು ವರ್ಷದ ಹಳೆಯ ದಾಖಲೆಗಳು ಇನ್ನು ಮುಂದೆ ನೀವು ಡಿಜಿಟಲ್ ಮುಖಾಂತರ ಪಡೆದುಕೊಳ್ಳಬಹುದು ಎಂದು ಮಾತನಾಡಿದ ತಾಲೂಕಿನ ದಂಡಾಧಿಕಾರಿಗಳಾದ ಪ್ರಕಾಶ್ ಹೊಳೆಪ್ಪಗೋಳ ಮಾತನಾಡಿದರು.
ನಂತರ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕರಾದ ಅಶೋಕ್ ಪಟ್ಟಣ ಅವರು ನಮ್ಮ ಸರ್ಕಾರ ಬಂದಮೇಲೆ ಜನರಿಗೆ ಬೇಗ ಬೇಗ ಸಿಗುವಂತ ಡಿಜಿಟಲೀಕರಣ ಹೊಸ ಹೊಸ ಯೋಜನೆಗಳು ತಂದಿವೆ ಈ ಯೋಜನೆಯು ಜನರಿಗೆ ಯಾವುದೇ ತೊಂದರೆ ಆಗದಂತೆ ನೀವು ಎಲ್ಲಾ ಸಿಬ್ಬಂದಿಗಳು ಕೂಡಿ ಜನರಿಗೆ ಯಾವುದು ತೊಂದರೆ ಆಗದೆ ತಲುಪುವ ವ್ಯವಸ್ಥೆ ಮಾಡಬೇಕು ಎಂದು ಮಾತನಾಡಿದರು.
ಈ ಒಂದು ಕಾರ್ಯಕ್ರಮದ ಸಮಾರಂಭದಲ್ಲಿ ತಹಶೀಲ್ದಾರ ಕಛೇರಿಯ ಎಲ್ಲ ಸಿಬ್ಬಂದಿ ವರ್ಗದವರು ಕೂಡಿಕೊಂಡು ಶಾಸಕರಿಗೆ ಸನ್ಮಾನ ಮಾಡಿದರು
ಈ ಒಂದು ಕಾರ್ಯಕ್ರಮ ಮುಗಿದ ನಂತರ ಬಂದ ಸಾರ್ವಜನಿಕರ ತಡೆ ಆಗುವು ತಮ್ಮ-ತಮ್ಮ ಕೆಲಸಗಳ ಶಾಸಕರ ಗಮನಕ್ಕೆ ತಂದರು ಶಾಸಕರು ಅಲ್ಲೇ ತಹಶೀಲ್ದಾರ ಅವರ ಮೂಲಕ ಅವರ ಕೆಲಸಗಳನ್ನು ಸರಿಪಡಿಸುವ ವ್ಯವಸ್ಥೆ ಮಾಡಿದರು.
ವರದಿ : ಮಂಜುನಾಥ ಕಲಾದಗಿ