ಬೆಳಗಾವಿ :ಕರ್ನಾಟಕ ರಾಜ್ಯದಲ್ಲಿ ಒಂದಿಲ್ಲ ಒಂದು ಆದೇಶ ಮಾಡಿ ಜನ ಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುವ ಹೊನ್ನರವಾಗಿದೆ. ಅದರಂತೆ ಡಾ|| ಬಿ.ಆರ್ ಅಭೀವೃದ್ಧಿ ನಿಗಮ, ವಾಲ್ಮೀಕಿ ನಿಗಮದಲ್ಲಿ 136 ಕೋಟಿ ರೂಪಾಯಿಗಳ ವರ್ಗಾವಣೆ ಮಾಡಿ. ರಾಜ್ಯದಲ್ಲಿ ಎಸ್.ಸಿ.ಪಿ. ಟಿ.ಎಸ್.ಪಿ ಅನುದಾನವನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿ, ದಲಿತರಿಗೆ ಅನ್ಯಾಯ ಮಾಡಿರುತ್ತೀರಿ ಸದರಿ ಅದರಂತೆ ಇತ್ತಿಚೀನ ದಿನಗಳಲ್ಲಿ ಅಡುಗೆ ಪದಾರ್ಥಗಳ ಬೆಲೆ ಏರಿಕೆ ಹೆಚ್ಚಿಸಿದ್ದು, ವಾಹನಗಳ ಪೇಟ್ರೋಲ್, ಡಿಸೇಲ್ (ತೈಲ ಬೆಲೆ ಏರಿಕೆ) ಮತ್ತು ಪ್ರತಿ ಲಿಕರ್ ಬೆಲೆ ಏರಿಕೆ ಅದರಂತೆ ಈಗ ಬಸ್ಸಿನ ಪ್ರಯಾಣ ದರ ಏಕಾಎಕಿ ಏರಿಕೆ ಮಾಡಿ ಜನಸಾಮಾನ್ಯರಿಗೆ ನೆರವಾಗಿ ತೊಂದರೆ ಕೋಡುವ ವಿಚಾರವಾಗಿದೆ.
ಹಾಗಾಗಿ ರಾಜ್ಯ ಕಾಂಗ್ರೇಸ್ ಸರ್ಕಾರ ಜನರ ನೋವು ಕಣ್ಣೀರು ಪರಿಗಣಿಸಿ ದಿನನಿತ್ಯ ಪ್ರಯಾಣಿಸುವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿದ್ದು ಹಾಗಾಗಿ ಈ ಕೂಡಲೇ ಬಸ್ಸಿನ ಪ್ರಯಾಣ ದರವನ್ನು ಇಳಿಕೆ ಮಾಡಿ ಹಳೇಯ ಬಸ್ಸಿನ ದರವನ್ನು ಮುಂದುವರೆಸುವಂತೆ ಮರು ಆದೇಶ ಮಾಡಬೇಕು, ಸದರಿ ಬೆಳಗಾವಿ ಜಿಲ್ಲೆಗಳಂತಹ ಖಾನಾಪೂರ ಗಡಿ ಭಾಗಗಳಲ್ಲಿ ಗುಡ್ಡಗಾಡು ಪ್ರದೇಶ ವಿದ್ದು ಬಸ್ಸಿಲ್ಲದೆ ಪರದಾಡುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಎದುರಾಗಿದೆ. ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪ ಸಂಖ್ಯಾತರಿಗೆ ತಮ್ಮ ಸರ್ಕಾರದಿಂದ ಅನೂಕೂಲವಾಗುವಂತೆ ಈ ಕೂಡಲೇ ಮರು ಆದೇಶಿಸಬೇಕೆಂದು ಯುವ ಕರ್ನಾಟಕ ಭೀಮ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ಮಾತನಾಡಿ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿ ಮಾತನಾಡಿದರು…
ಆ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾದ ಮಲಪ್ಪಣ ಅಕ್ಕಮಡ್ಡಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೊಜಿ, ಜಿಲ್ಲಾ ಉಪಾಧ್ಯಕ್ಷರಾದ ಸಚಿನ್ ಕೊಲಕಾರ, ಜಿಲ್ಲಾ ಸಂಘಟನಾ ಸಂಚಾಲಕ ಆಕಾಶ ಕಾಂಬಳೆ, ಬೆಳಗಾವಿ ನಗರ ಘಟಕದ ಅಧ್ಯಕ್ಷ ಸಂಪತ್ ಬಲೋಗಿ, ನಗರ ಜಿಲ್ಲಾ ಉಪಾಧ್ಯಕ್ಷರಾದ ಕ್ರೀಷ್ಣಾ ಕಾಂಬಳೆ. ಕೆ.ಕೆ.ಕೋಪ ಗ್ರಾಮದ ವಿಠಲ, ನಾಗರಾಜ್ ಅನೇಕ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು…
ವರದಿ :ಅಜಯ ಕಾಂಬಳೆ