ನಿಪ್ಪಾಣಿ:- ತಾಲೂಕಿನ ಬೇಡಕಿಹಾಳ ಗ್ರಾಮದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಘಟಕದ ಸದಸ್ಯರಿಂದ ಗ್ರಾಮದ ಗಳತಗಾ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿಯ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ರುದ್ರ ಭೂಮಿ ಪರಿಸರದಲ್ಲಿಯ ಗಿಡಗಂಟಿ, ಹುಲ್ಲು, ತ್ಯಾಜ್ಯ ವಸ್ತುಗಳ ಸಂಗ್ರಹಣೆ ಹಾಗೂ ಸಂಪೂರ್ಣ ರುದ್ರ ಭೂಮಿಯಲ್ಲಿಯ ಕಸ ಕಡ್ಡಿಗಳನ್ನು ಗುಡಿಸಿ ನೀರಿನಿಂದ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಮುಖಂಡ ಬಾಳಾಸಾಹೇಬ ಶಿಂದೆ, ಹಾಗೂ ರಾಜಶೇಖರ್ ಕೊಡದವರ ಮಾತನಾಡಿ “ಘಟಕದ ಇಪ್ಪತ್ತಕ್ಕೂ ಅಧಿಕ ಸದಸ್ಯರಿಂದ ನಿರಂತರ ಗ್ರಾಮದಲ್ಲಿಯ ರೈತರ ಸಮಸ್ಯೆಗಳಿಗೆ, ನಿರಾಧಾರ ವ್ಯಕ್ತಿಗಳಿಗೆ ಸಹಾಯ ಮಾಡುವುದು,ಗ್ರಾಮದಲ್ಲಿಯ ಸ್ವಚ್ಛತೆಗೆ ಮಹತ್ವ ನೀಡಿ ಕಾರ್ಯಪ್ರವರ್ತರಾಗುವುದು.
ಮುಂತಾದ ವಿಧ ವಿಧೇಯಕ ಕಾರ್ಯಗಳನ್ನು ಮಾಡುತ್ತಿದ್ದು ಗ್ರಾಮಸ್ಥರ ಸಹಕಾರ್ಯ ದೊರೆಯುತ್ತಿದೆ ಎಂದರು. ರುದ್ರಭೂಮಿ ಸ್ವಚ್ಛತೆಯ ಕಾರ್ಯದಲ್ಲಿ ಭಗವಂತ ದೇಸಾಯಿ, ಸಂತೋಷ ದೇಸಾಯಿ,ವಿಠಲ ಮಾಳಿ, ಶಬ್ಬೀರ್ ಪುನಚಾರ್ ಅನಿಲ ಘೋರ್ಪಡೆ, ಕುಮಾರ ಭುಯಿ, ಅಕ್ಷಯ ನಾರೆ, ರಾಜು ನಾಯಕ, ಸುರೇಶ ಡೋಮನೆ,ವಿಠ್ಠಲ ಸಂಗಾನೆ, ಸುರೇಶ್ ಸುತಾರ, ಭಜರಂಗ ಪೂಜಾರಿ ಹಾಗೂ ಹರೀಶ್ ಶಿಂದೆ ಭಾಗವಹಿಸಿದ್ದರು.
ವರದಿ:- ಮಹಾವೀರ ಚಿಂಚಣೆ.