ಚಾಮರಾಜನಗರ:-ಯುವಜ ನಾಂಗ ಮಾದಕ ವಸ್ತುಗಳಿಂದ ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶ ಈಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂ ಸೇವೆಗಳ ಪ್ರಾಧಿಕಾರ, ನೆಹರು ಯುವಕೇಂದ್ರ, ಜೈಭುವನೇಶ್ವರಿ ಕನ್ನಡ ಯುವ ವೇದಿಕೆ ಹಾಗೂ ಕೆಎಸ್ಎಸ್ ಸ್ಕೂಲ್ ಆ್ ನರ್ಸಿಂಗ್ ಸಹಯೋಗದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದೇ ಹೊರತು, ಅದು ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮಗಳನ್ನು ಬೀರುತ್ತದೆ. ಮಾದಕ ವಸ್ತುಗಳಿಗೆ ದಾಸರಾದರೇ ಅದು ಮಾನಸಿಕ ಮತ್ತು ದೈಹಿಕವಾಗಿ ನಮ್ಮನ್ನು ಹಾಳು ಮಾಡುತ್ತದೆ. ಆಗಾಗಿ ಮಾದಕ ವಸ್ತುಗಳಿಂದ ಯುವಜನಾಂಗ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಭವಿಷ್ಯವನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಾಗಿ ಓದಿನ ಕಡೆ ಗಮನಹರಿಸಬೇಕು. ಅದರಲ್ಲೂ 13-19 ವಯಸ್ಸಿನ ಯುವಕ-ಯುವತಿಯರು ತಮ್ಮ ಚಂಚಲವಾದ ಮನಸ್ಸಿಗೆ ಕಡಿವಾಣವನ್ನು ಹಾಕಿಕೊಳ್ಳಬೇಕು. ಈ ವಯಸ್ಸಿನಲ್ಲಿ ಕೆಟ್ಟ ಸ್ನೇಹಿತರು, ಕೆಟ್ಟ ಚಟಗಳ ಸಹವಾಸ ಹಾಗೂ ಪ್ರೀತಿ-ಪ್ರೇಮದ ಹಿಂದೆ ಬಿದ್ದು, ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಡಾ.ಕೆ.ಬಿ.ಅಭಿಷೇಕ್ ಮಾತನಾಡಿ, ವಿದ್ಯಾರ್ಥಿ ತಮ್ಮ ಜೀವನದಲ್ಲಿ ಶಿಸ್ತು-ಸಂಯಮವನ್ನು ಅಳವಡಿಸಿಕೊಂಡರೆ ಅದೇ ಮೊದಲ ಯಶಸ್ಸು ಇದ್ದಂತೆ. ಹೆಣ್ಣು ಮಕ್ಕಳು ಯಾವುದೇ ವೈಕ್ತಿಕ ಸಮಸ್ಯೆಗಳು ಇದ್ದಾಗ, ತಮ್ಮ ಶಿಕ್ಷಕರು ಮತ್ತು ಪಾಲಕರ ಜತೆಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಏನೇ ಸಮಸ್ಯೆಗಳು ಇದ್ದರೂ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.
ಜೆಎಸ್ಎಸ್ ಸ್ಕೂಲ್ ಆ್ ನರ್ಸಿಂಗ್ ಪ್ರಾಂಶುಪಾಲ ಜಿ.ವಿನಯ್ ಕುಮಾರ್ ಮಾತನಾಡಿ, ಯಾವುದೇ ಅಪಘಾತ ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬಂದರೂ ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ವಿಧ್ಯಭ್ಯಾಸದ ಜತೆಗೆ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಮಾದಕ ವಸ್ತುಗಳನ್ನು ಬಳಕೆ ಮಾಡುವವರ ಮನಃ ಪರಿವರ್ತನೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜೈಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು, ನೆಹರು ಯುವಕೇಂದ್ರ ಲೆಕ್ಕಾಧಿಕಾರಿ ಸತೀಶ್, ಸಹನಾ, ಉಪನ್ಯಾಎಕರಾದ ಎಂ.ಮಂಜುಳಾ, ಬಿ.ಸಂಧ್ಯಾಶ್ರೀ. ಮಧು, ಎಚ್.ಎಸ್.ಸುಷ್ಮಿತಾ, ಕೆ.ಎಂ.ಮಹದೇವಸ್ವಾಮಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ