ಕಲಘಟಗಿ: -ಪಟ್ಟಣದ ಆಂಜನೇಯ ಸರ್ಕಲ್ ಬಳಿ ತಾಲೂಕಿನ ಸಾರ್ವಜನಿಕರು ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲ್ಲು ಸಮಾರಂಭಕ್ಕೆ ಅಡ್ಡಿ ಪಡಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು .
ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಆಂಜನೇಯ ಸರ್ಕಲ್ಗೆ ಹೊಂದಿಕೊಂಡಿರುವ ಸರಕಾರಿ ಕೆರೆ ಸನಿಹದಲ್ಲಿ ತಾಲೂಕಿನ ಸಾರ್ವಜನಿಕರು ಒಗ್ಗೂಡಿಕೊಂಡು ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಯ ಅಡಿಗಲ್ಲು ಸಮಾರಂಭಮಾಡಬೇಕೆಂದು ಮುಂದಾದಾಗ ಜೆಸಿಬಿ ಮೂಲಕ ಅಡಿಗಲ್ಲು ಸಮಾರಂಭಕ್ಕೆ ಸ್ವಚ್ಚತಾಕಾರ್ಯ ಪ್ರಾರಂಬಿಸಿದಾಗ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು
ಸ್ವಚ್ಚತಾಕಾರ್ಯ ನಿಲ್ಲುವಂತೆ ಸೂಚಿಸಿದ್ದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯ ಕೆಲ ಹೊತ್ತು ಮಾತಿನ ಚಕಮಕಿ ಜರುಗಿ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು
ಈ ವೇಳೆ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿ ಸಿ.ವಿ ಕುಲಕರ್ಣಿ ಆಗಮಿಸಿ ಇದು ಸರಕಾರಿ ಕೆರೆಯಾದ್ದರಿಂದ ಸರ್ಕಾರದ ಆದೇಶವಿಲ್ಲದೆ ಯಾವುದೇ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶವಿರುವುದಿಲ್ಲ, ಇಗಾಗಲೇ ಕೆರೆ ಸರ್ವೆ ಮಾಡಲು ಅಧಿಕಾರಿಗಳಿಗೆ ಒಪ್ಪಿಸಿದ್ದೆವೆ ಒತ್ತುವರಿ ಮಾಡಿಕೊಂಡಿದ್ದ ಕೆರೆಯನ್ನು ಕೂಡ ತೆರವುಗೊಳಿಸಲಾಗುವುದು ಎಂದರು.
ಖಾಸಗಿ ವ್ಯಕ್ತಿಗಳಿಂದ ಕೂಡ ತಡೆ ಖಾಸಗಿ ವ್ಯಕ್ತಿಗಳು ಕೂಡ ತಮ್ಮದು ಜಾಗ ಇರುವ ಬಗ್ಗೆ ತಕರಾರು ವ್ಯಕ್ತ ಪಡಿದ್ದಾರೆ.
ಕಾರಣ ಕೆರೆ ಸಂಪೂರ್ಣವಾಗಿ ಸರ್ವೆಯಾಗಿ ಆದೇಶ ಬರುವವರೆಗೂ ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ಇದಕ್ಕೆ ನಮ್ಮ ತಕರಾರು ಇರುತ್ತದೆ ಎಂದಿದ್ದಾರೆ.ಈ ಸಂದರ್ಭದಲ್ಲಿ ಎಸ್.ಆರ್ ಪಾಟೀಲ್, ನಿಂಗಪ್ಪ ಸುತಗಟ್ಟಿ, ಮಂಜುನಾಥ ಮುರಳ್ಳಿ, ಶಶಿಧರ ನಿಂಬಣ್ಣವರ,ಸಿದ್ಧಪ್ಪ ಬೀದರಳ್ಳಿ, ಮಂಗಲಪ್ಪ ಲಮಾಣಿ, ಬಿ.ವಾಯ್ ಪಾಟೀಲ್, ಐ.ಸಿ ಗೋಕುಲ, ಸುರೇಶ ಶೀಲವಂತರ, ಶಿವಲಿಂಗಪ್ಪ ಯಲಿವಾಳ, ಕಲ್ಲಪ್ಪ ಪುಟ್ಟಪ್ಪನವರ, ಎಫ್.ಕೆ ನಿಗಧಿ, ಅರ್ಜುನ ಲಮಾಣಿ , ಪರಶುರಾಮ ರಜಪೂತ, ಗೀತಾ ಮರಲಿಂಗಣ್ಣವರ, ಬೂದಪ್ಪ ಹುರಕಡ್ಲಿ, ಪರಮಾನಂದ ಒಡೆಯರ, ಶಂಕ್ರಣ್ಣ ರಾಯನಾಳ, ಚಂದ್ರಗೌಡ ಪಾಟೀಲ, ಸಂಗಮೇಶ ತೋಟಗಂಟಿ, ಶೇಖಯ್ಯ ತಾವರಗೇರಿ, ಪರಶುರಾಮ ಹುಲಿಹೊಂಡ ಸೇರಿದಂತೆ ತಾಲೂಕಿನ ಎಲ್ಲಾ ಸಮಾಜಬಾಂಧವರು ಪಾಲ್ಗೊಂಡಿದ್ದರು.
ವರದಿ : ಶಶಿಕುಮಾರ ಕಲಘಟಗಿ