ಮುದಗಲ್ಲ: ಪತ್ರಿಕಾ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಮುದಗಲ್ ತಾಲ್ಲೂಕು ರಚನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಮುಖ್ಯ ಮಂತ್ರಿಗಳು ಹೊಸ ತಾಲ್ಲೂಕು ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಪ್ರಯತ್ನ ಮಾಡುತ್ತೇನೆ. ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ ಕೈ ಬಿಟ್ಟ 30 ಗ್ರಾಮಗಳನ್ನು ಮತ್ತೆ ಯೋಜನೆಗೆ ಸೆರ್ಪಡೆ ಮಾಡುತ್ತೇನೆ. ಪಟ್ಟಣಕ್ಕೆ ನಿರಂತರ ಕುಡಿವ ನೀರಿನ ಯೋಜನೆಗೆ ಮರು ಟೆಂಡರ್ ಕರೆಯಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಮುದಗಲ್ ಉತ್ಸವ ಮಾಡಲು ಜಿಲ್ಲಾಧಿಕಾರಿಗಳಿಗೆ ವರದಿ ಬಂದಿದೆ. ಮುದಗಲ್ ಪತ್ರಿಕಾ ಭವನ ನಿರ್ಮಾಣಕ್ಕೆ ರೂ.15 ಲಕ್ಷ ಅನುದಾನ ನೀಡುತ್ತೇನೆ. ಮುದಗಲ್ ಪೊಲೀಸ್ ಠಾಣೆಗೆ ಕೆ.ಕೆ.ಆರ್.ಡಿ.ಬಿ ಯೋಜನೆಯಲ್ಲಿ ವಾಹನ ನೀಡಲು ಪ್ರಯತ್ನಿಸುತ್ತೇನೆ ಎಂದರು.
ವರದಿ: ಮಂಜುನಾಥ ಕುಂಬಾರ