Ad imageAd image

ಮಾದಕ ವ್ಯಸನಿಗಳ ನಿಯಂತ್ರಣಕ್ಕಾಗಿ ಆಸಿಫ್ (ರಾಜು) ಸೇಟ್ ಫೌಂಡೇಶನ್ ಸ್ಥಾಪನೆ

Bharath Vaibhav
ಮಾದಕ ವ್ಯಸನಿಗಳ ನಿಯಂತ್ರಣಕ್ಕಾಗಿ ಆಸಿಫ್ (ರಾಜು) ಸೇಟ್ ಫೌಂಡೇಶನ್ ಸ್ಥಾಪನೆ
WhatsApp Group Join Now
Telegram Group Join Now

ಬೆಳಗಾವಿ : ಯುವ ಸಮೂಹ ಡ್ರಗ್ ಜಾಲಕ್ಕೆ ಬಲಿಯಾಗಿ, ಸಮಾಜವನ್ನೇ ಹಾಳು ಮಾಡುವಂತಹ ವಾತಾವರಣ ನಿರ್ಮಾಣವಾಗುತ್ತಿದ್ದು,  ಈ ಕೆಟ್ಟ ಪರಿಸ್ಥಿತಿಯನ್ನು ಹೋಗಲಾಡಿಸಲು ಬೆಳಗಾವಿಯಲ್ಲಿ “ಆಶಿಫ್ (ರಾಜು) ಸೇಠ್ ಫೌಂಡೇಶನ್” ಪ್ರಾರಂಭ ಮಾಡುತ್ತಿದ್ದೆವೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಆಶಿಫ್ (ರಾಜು) ಸೇಠ್ ತಿಳಿಸಿದ್ದಾರೆ.

 

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಶಾಸಕರು, ನಗರದಲ್ಲಿ ಡ್ರಗ್ಸ್ ತಗೆದುಕೊಳ್ಳುವ ಯುವಸಮೂಹದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುಇದನ್ನು ನಿಯಂತ್ರಿಸಲು ಹಾಗೂ ನಗರವನ್ನು ಡ್ರಾಗ್ಸ್ ಮುಕ್ತ ಮಾಡಲು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು, ಸರ್ವರಿಗೂ ಆರೋಗ್ಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಈ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ ಎಂದರು.ಅನೇಕ ಬಡ ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಲು ಅನೇಕ ಯೋಜನೆ ಹಾಕಿಕೊಂಡಿದ್ದೇವೆ, ಸರ್ಕಾರದ ಅನೇಕ ವೈದ್ಯಕೀಯ ಸೌಲಭ್ಯಗಳ ಮಾಹಿತಿ ನೀಡಿ, ಅವುಗಳ ಪ್ರಯೋಜನೆ ಜನರಿಗೆ ದೊರಕುವಂತೆ ಮಾಡುವದು, ಒಂದು ವೇಳೆ ಸರ್ಕಾರದ ಸೌಲಭ್ಯ ದೊರೆಯದ ಪಕ್ಷದಲ್ಲಿ ನಮ್ಮ ಸಂಸ್ಥೆಯಿಂದ ವೈದ್ಯಕೀಯ ನೆರವು ನೀಡುತ್ತೇವೆ, ಇದರಲ್ಲಿ ರಾಜಕೀಯ ಏನು ಇಲ್ಲಾ, ನಮ್ಮ ತಂದೆಯವರ ಕಾಲದಿಂದಲೂ ನಮ್ಮಿಂದ ಸಮಾಜಸೇವೆ ನಡೆದುಬಂದಿದೆ ಎಂದಿದ್ದಾರೆ. ಈ  ಟ್ರಸ್ಟಿಗೆ ಸರ್ಕಾರದಿಂದಾಗಲಿ ಅಥವಾ ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳಿಂದಾಗಲಿ ಏನೂ ಸಹಾಯವನ್ನು ಪಡೆಯುತ್ತಿಲ್ಲ, ಏನೇ ಬಂದರು ನಮ್ಮ ಫೌಂಡೇಶನ್ ಕಡೆಯಿಂದ ನಾವೇ ಎಲ್ಲವನ್ನು ಭರಿಸುತ್ತೇವೆ, ಆದರೆ ಎಲ್ಲರ ಸಹಕಾರ ಪ್ರೋತ್ಸಾಹ ನಮ್ಮ ಈ ಆಶಿಫ್ (ರಾಜು) ಸೇಠ್ ಫೌಂಡೇಶನಗೆ ಇರಬೇಕು ಎಂದು ಕೇಳಿಕೊಂಡಿದ್ದಾರೆ

 

ವರದಿ: ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!