ಧಾರವಾಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ಮಾಡಿ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಪರ್ವೇಜ್ ಪಠಾಣ್ ಎಂದು ಗುರುತಿಸಲಾಗಿದ್ದು, ಕಳೆದ ಜನವರಿ 4ರಂದು ಕಾಲೇಜಿಗೆ ಬಿಡುವುದಾಗಿ ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ.
ಧಾರವಾಡದ ಕ್ಲಾಸಿಕ್ ಇಂಟರ್ ನ್ಯಾಷನಲ್ ಕಾಲೇಜಿನ ಹಿಂದೆ ಇರುವ ಅಜ್ಞಾತ ಸ್ಥಳಕ್ಕೆ ಬಾಲಕಿಯನ್ನ ಒತ್ತಾಯ ಪೂರ್ವಕವಾಗಿ ಬೈಕ್ ಮೇಲೆ ಕರೆದುಕ್ಕೋಂಡು ಹೋಗಿದ್ದಾನೆ.
ಈ ವೇಳೆ ಬಾಲಕಿಯ ದೇಹದ ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟಿ, ಅವಳಿಗೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಅಶ್ಲೀಲ ಫೋಟೋ ತೋರಿಸಿ ಪ್ರಚೋದನೆ ಆಗುವಂತೆ ನಡೆದುಕೊಂಡಿದ್ದಾನೆ.
ಈ ವೇಳೆ ಅವಳು ಒಪ್ಪದೇ ಇದ್ದಾಗ ಆಕೆ ಮೇಲೆ ಹಲ್ಲೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆತ ಬೆದರಿಕೆ ಕೂಡ ಹಾಕಿದ್ದಾನೆ.
ಬಳಿಕ ಬಾಲಕಿ ಮತ್ತು ಪೋಷಕರು ಪರಸ್ಪಠಣ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಆರೋಪಿ ಪರ್ವೇಜ್ ಪಠಣ್ ನ ಮೇಲೆ ಪ್ರಕರಣದ ದಾಖಲಿಸಿಕೊಂಡ ಉಪನಗರ ಪೋಲಿಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.ಪೋಲಿಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿ ಆರೊಪಿಯನ್ನ ಬಂಧಿಸಿದ್ದಾರೆ.