Ad imageAd image

ಮದುವೆಗೆ ಮಾಡಿದ್ದ ಖರ್ಚು ತಗೊಂಡು ಬರುವಂತೆ ಒತ್ತಾಯ : ಗರ್ಭಿಣಿ ಆತ್ಮಹತ್ಯೆ 

Bharath Vaibhav
ಮದುವೆಗೆ ಮಾಡಿದ್ದ ಖರ್ಚು ತಗೊಂಡು ಬರುವಂತೆ ಒತ್ತಾಯ : ಗರ್ಭಿಣಿ ಆತ್ಮಹತ್ಯೆ 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ನಡೆದಿದೆ.

ರೂಪಾ (29) ಮೃತ ಮಹಿಳೆ.2 ವರ್ಷಗಳ ಹಿಂದೆಯಷ್ಟೇ ಸುರೇಶ್‌ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸುರೇಶ್‌ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ. ಮದುವೆ ಸಮಯದಲ್ಲಿ ರೂಪಾ ಕುಟುಂಬಸ್ಥರು 100 ಗ್ರಾಂ ಒಡವೆ ನೀಡಿದ್ದರು.

ಆದರೆ ಸುರೇಶ್‌ ಕುಟುಂಬಸ್ಥರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆ ಹಣವನ್ನು ತೆಗೆದುಕೊಂಡು ಬಾ ಎಂದು ಆಕೆಗೆ ಕಿರುಕುಳ ನೀಡುತ್ತಿದ್ದರು. ಕಿರುಕುಳಕ್ಕೆ ಬೇಸತ್ತ ರೂಪ ಡೇತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೇತ್‌ನೋಟ್‌ನಲ್ಲಿ ನನ್ನ ಸಾವಿಗೆ ಪತಿ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ಘಟನೆಗೆ ಸಂಬಂಧಿಸಿ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿದ್ದು, ಸುರೇಶ್‌ ತಂದೆ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!