ಯಮಕನಮರಡಿ : ನಿಂಗಾನಟ್ಟಿ ಗ್ರಾಮದ ಯೋಧ ಶ್ರೀ ರವಿ ಅವರ ಪಾರ್ಥಿವ್ ಶರೀರಕ್ಕೆ ನಮನ ಸಲ್ಲಿಸಿದ ರಾಹುಲ್ ಜಾರಕಿಹೊಳಿ.
ದಿನಾಂಕ 11-01-2025 ರಂದು ಯುವ ನಾಯಕರಾದ ರಾಹುಲ ಜಾರಕಿಹೊಳಿಯವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿಲ್ಲಾ ಪಂ ನಿಂಗೇನಟ್ಟಿ ಗ್ರಾಮದ ಯೋಧ ಶ್ರೀ ರವಿ ತಳವಾರ ಅವರು ನಾಗಾಲ್ಯಾಂಡ್ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ 41ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು. ಈ ವೇಳೆ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಿದರು
“ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧ ಶ್ರೀ ರವಿ ತಳವಾರ ಅವರ ಬಲಿದಾನವನ್ನು ನಾವು ಸದಾ ಸ್ಮರಿಸುತ್ತೇವೆ. ಅವರು ನಮ್ಮ ಹೆಮ್ಮೆ ಮತ್ತು ಪ್ರೇರಣೆಯಾದರೆ, ಅವರ ಕುಟುಂಬಕ್ಕೆ ಈ ದುಃಖದ ಸಮಯದಲ್ಲಿ ದೇವರು ಶಕ್ತಿ ನೀಡಲಿ ಎಂಬುದು ನಮ್ಮ ಪ್ರಾರ್ಥನೆ.”ಈ ಸಂದರ್ಭದಲ್ಲಿ ಸಚಿವರ ಆಪ್ತರಾದ ಶ್ರೀ ಮಲಗೌಡ ಅಣ್ಣಾ ಪಾಟೀಲ.ಶ್ರೀ ರಾಮಣ್ಣಾ ಗುಳ್ಳಿ.ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ