ಕೇಂದ್ರ ಸರ್ಕಾರದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಖಾಸಗಿ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಬರೋಬ್ಬರಿ 2.9 ಕೋಟಿ ದೋಚಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ.ವರದಿಯ ಪ್ರಕಾರ, ತಬ್ಸಂ ಬೇಗಂ ಎಂಬ ಯುವತಿ ವಂಚನೆಗೆ ಒಳಗಾದ ವ್ಯತಿಯನ್ನು ಜಿಮ್ ವೊಂದರಲ್ಲಿ ಪರಿಚಯ ಮಾಡಿಕೊಂಡಿದ್ದಳು.
ಹೀಗೆ ಜಿಮ್ ನಲ್ಲಿ ಪರಿಚಯವಾದ ಈ ಸ್ನೇಹ ಕಾಲಕ್ರಮೇಣ ಇನ್ನಷ್ಟು ಹತ್ತಿರವಾಗಿ ಆತನ ಖಾಸಗಿ ಫೋಟೋಗಳನ್ನು ಆತನಿಗೆ ಗೊತ್ತಿಲ್ಲದಂತೆ ತೆಗೆದುಪ್ಲಾನ್ ನಂತೆ ಹನಿಟ್ರ್ಯಾಪ್ ಗೆ ಬೀಳಿಸಿಕೊಂಡಿದ್ದಾಳೆ.
ಇದಾಗಿ ಕೆಲ ತಿಂಗಳ ಬಳಿಕ ಆತನ ಮೊಬೈಲ್ ಗೆ ಆತನ ಖಾಸಗಿ ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಅದರಂತೆ ಸಂತ್ರಸ್ತನ ಬಳಿ ಕಂತು ಕಂತುಗಳ ರೀತಿ ಬರೋಬ್ಬರಿ 2.9 ಕೋಟಿ ರೂ. ನಷ್ಟು ಪಡೆದಿದ್ದಾರೆ.
ಇದಾದ ಮೂರು ವರ್ಷದ ಬಳಿಕ ಸಂತ್ರಸ್ತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಗೆ ದೂರು ನೀಡಿದ್ದಾರೆ. ಅದರಂತೆ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.