ಹಲ್ಯಾಳ : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ವೇತನದಲ್ಲಿ ಬೇಕಾಗುವ ಸಾಮಗ್ರಿ ಕಲ್ಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ತಮ್ಮ ಜೀವನವನ್ನೇ ಶ್ರಮಿಸುತ್ತಿರುವ ಶಿಕ್ಷಕರು ಇದ್ದಾರೆ. ಸರಕಾರದ ಎಲ್ಲ ಯೋಜನೆಗಳನ್ನು ಬಕ್ಷಿಸಿ, ಕೇವಲ ವೇತನಕ್ಕಾಗಿ ಪವಿತ್ರ ವೃತ್ತಿಗೆ ದ್ರೋಹ ಬಗೆಯುತ್ತಿರುವ ಶಿಕ್ಷಕರು ಇದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತಿದ್ದಾರೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ದೇವರಿಗಿಂತ ಮಿಗಿಲಾದ ವ್ಯಕ್ತಿತ್ವ ಹೊಂದಿರುವ ಗುರು ತಮ್ಮ ಸ್ವಾರ್ಥಕ್ಕೆ, ಸೋಮಾರಿತನಕ್ಕೆ ಮೌಲ್ಯಗಳನ್ನೇ ನುಂಗಿ ವೇತನಕ್ಕಾಗಿ ಹಾಜರಾತಿಗೆ ಬಂದು ಕಾಟಾಚಾರಕ್ಕೆ ಬೋಧಿಸುತ್ತಿದ್ದಾನೆ. ಮಕ್ಕಳ ಭವಿಷ್ಯ ಉಜ್ವಲ ಗೊಳ್ಳುವುದು ಯಾವಾಗ? ಹಾಜರಾತಿಗೆ ಸಹಿ ಮಾಡಿ ಕುಂಟು ನೆಪ ವಡ್ಡಿ ನಂದು ಆ ಕೆಲಸ ಈ ಕೆಲಸ ಎಂದು ಕಳ್ಳಾಟವಾಡುತ್ತಿರುವರು
ಹೀಗೆ ಕರ್ತವ್ಯ ಲೋಪಎಸುಗುವ ಶಿಕ್ಷಕರಿಗೆ ಬುದ್ಧಿ ಕಲಿಸುವವರು ಯಾರು? ಶಾಲೆಗಳಲ್ಲಿ ಹೊಂದಾಣಿಕೆ ಇರುವುದರಿಂದ ಕಲಿಕೆ ಪರಿಣಾಮಕಾರಿ ಯಾಗುತ್ತಿಲ್ಲ. ಹೊಂದಾಣಿಕೆ ಎನ್ನುವ ಪದದಲ್ಲಿ ನಿರೀಕ್ಷೆಗೂ ಮೀರಿದ ಅರ್ಥವಿದೆ. ಮಕ್ಕಳಿಗೆ ಬೇಕಾಗುವ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಕುಗ್ಗುತ್ತಿದೆ. ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರು ಹಿಂದೇಟು ಹಾಕುತಿದ್ದಾರೆ. ಕೇವಲ ಪುಸ್ತಕದ ಜ್ಞಾನ ಇದ್ದರೆ ಸಾಲದು ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿ ಅವರಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಶಿಕ್ಷಕರ ಕರ್ತವ್ಯ.
ಮಕ್ಕಳ ಆಸಕ್ತಿಗೆ,ಅಭಿರುಚಿಗೆ ಅನುಗುಣವಾಗಿ ಉತ್ತಮ ಆಲೋಚನೆಗಳು ನೆಲೆಸುವ ರೀತಿ ಶಿಕ್ಷಣ ನೀಡುವುದು ತಮ್ಮ ಕರ್ತವ್ಯ ಎಂಬುದೇ ಮರೆತು ತಮ್ಮ ಕುಟುಂಬ ಮಕ್ಕಳು ಎನ್ನುವ ಆಲೋಚನೆಗಳಲ್ಲೇ ದಿನ ಕಳೆಯುವ ಶಿಕ್ಷಕರಿಗೆ ಯಾರು ಶಿಕ್ಷಿಸುವರು ಇದಕ್ಕೆ ಪರಿಹಾರ ಇದೆಯಾ? ಹೇಗೆ? ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರಿ ಶಾಲೆಯ ಕೆಲವು ಸ್ವಾರ್ಥ, ಪ್ರಭಾವಿ ಶಿಕ್ಷಕರು ತಮ್ಮ ಮಕ್ಕಳ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮದ ಮೀಸಲಾತಿಗಾಗಿ ತಮ್ಮ ಮಕ್ಕಳ ನೋಂದಣಿಯನ್ನು ಸರಕಾರಿ ಶಾಲೆಯಲ್ಲಿ ನೊಂದಾಯಿಸಿ,ಅವರನ್ನು ಖಾಸಗಿ ಶಾಲೆಗಳಿಗೆ ಓದಿಸುವುದು ಎಷ್ಟು ಸರಿ. ಇದು ಸರಕಾರಕ್ಕೂ ಮತ್ತು ತಮ್ಮ ವೃತ್ತಿಗೂ ಮಾಡುತ್ತಿರುವ ಘೋರ ಅನ್ಯಾಯವಲ್ಲವೇ.
ಈ ವಿಷಯ ಎಲ್ಲರಿಗೂ ಗೊತ್ತಿದ್ದೂ ಜಾಣ ಕುರುಡರಂತೆ ಇರೋದ್ಯಾಕೆ? ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಅನ್ನೋ ಸ್ವಾರ್ಥಿಗಳಾಗದೆ. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ತಮ್ಮ ಮಕ್ಕಳ ಜೊತೆಗೆ ಇನ್ನುಳಿದ ಮಕ್ಕಳು ಕೂಡಾ ಅಭಿವೃದ್ಧಿ ಆಗುತ್ತಾರೆ. ಈ ರೀತಿ ಮಾಡುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಆಗುವುದು. ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಯೋಗ್ಯ ಶಿಕ್ಷಣದಿಂದ ಮಾತ್ರ ಸಾಧ್ಯ ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ ಇದನ್ನು ಉಪದೇಶ ಮಾಡೋಕೆ ಮಾತ್ರ ಸೀಮಿತ ಎನ್ನುವ ನಿಟ್ಟಿನಲ್ಲಿ ಕಾಲ ಕಳೆಯುತ್ತಾರೆ.
ಖಾಸಗಿ ಶಾಲೆಯ ಶಿಕ್ಷಕರಿಗೆ ಹತ್ತಾರು ಸಮಸ್ಯೆ ಹೇಳಿ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಿ.ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡುವ ಶಿಕ್ಷಕರು ತಮ್ಮ ವೃತ್ತಿಗೆ ಮಾತ್ರ ಕಾರಣ ಹುಡುಕುತ್ತಾರೆ ಇವೆಲ್ಲ ಸರಿ ದೂಗಬೇಕಾದರೆ.ಸರಕಾರ ಈ ಉನ್ನತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.
1)ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿರುವ ಶಿಕ್ಷಕರಿಗೆ ವಿಶೇಷ ಮುಂಬಡ್ತಿ ನೀಡಲಾಗುವುದು.
2) ವಿಶೇಷ ಸೇವಾ ಭದ್ರತೆ ಕೊಡಲಾಗುವುದು.
3) ವೇತನದ ಪ್ರಮಾಣ ಹೆಚ್ಚಿಸುವುದು.
4) ತಮ್ಮ ವಿಷಯದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರಗಳನ್ನು ಆಯೋಜಿಸಲಾಗುವುದು.
5) ತಮ್ಮ ವಿಷಯದಲ್ಲಿ ಸಾಧನೆ ಕುಂಠಿತವಾದಲ್ಲಿ ಅಂತಹ ಶಿಕ್ಷಕರಿಗೆ, ಸೌಲಭ್ಯ ಗಳನ್ನು ನಿರಾಕರಿಸುವುದು.
ಹೀಗೆ ಶಿಕ್ಷಣ ತಜ್ಞರ ಜೊತೆ ಸಮಾಲೋಚಿಸಿ ಒಳ್ಳೆಯ ಗುಣಮಟ್ಟದ ಶಿಕ್ಷಣ ತರುವಲ್ಲಿ ತ್ವರಿತಗತಿಯಲ್ಲಿ ಆಗಾಗ ಕಾರ್ಯಗಾರಗಳನ್ನು ಆಯೋಜಿಸಬೇಕು. ಮೇಲಾಧಿಕಾರಿಗಳು ಶಾಲೆಗಳಿಗೆ ದಿಡೀರ್ ಭೇಟಿ ನೀಡಿ ಶಿಕ್ಷಣದ ಬಗ್ಗೆ ಮೇಲ್ವಿಚಾರಣೆ ಮತ್ತು ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಪೂರ್ಣಅಧಿಕಾರವನ್ನು ನೀಡಬೇಕು.
ಶಿಕ್ಷಕರು ಇತ್ತೀಚಿಗೆ ಸ್ವಪ್ರತಿಷ್ಠೆಗೋಸ್ಕರ ಸಂಘಟನೆಯಲ್ಲಿ ಪ್ರತಿಬಿಂಬಿತವಾಗುತ್ತಿದ್ದಾರೆ. ಪ್ರತಿದಿನ ಸನ್ಮಾನ ಕಾರ್ಯಕ್ರಮಗಳು ಮತ್ತು ಇನ್ಯಾವುದೋ ಕೆಲಸ ಇದೆ ಎಂದು ತಮ್ಮ ಸಂಘದ ಪ್ರಭಾವದಿಂದ ಶಾಲೆಗೆ ಗೈರಾಗುತ್ತಿದ್ದಾರೆ ಇದರಿಂದ ಮಕ್ಕಳಿಗೆ ಸರಿಯಾಗಿ ಭೋದಿಸುತ್ತಿಲ್ಲ. ತಮ್ಮ ಭದ್ರತೆಗೋಸ್ಕರ ಅದೇಷ್ಟೋ ಶಾಲೆಗಳಲ್ಲಿ ಪರೀಕ್ಷೆ ಮುಂಚಿತವಾಗಿ ಪ್ರಶ್ನೆಗಳನ್ನು ಕೊಟ್ಟು ಅಂಕಪಟ್ಟಿ ಸಿದ್ದಪಡಿಸುತ್ತಿದ್ದಾರೆ. ಕರ್ತವ್ಯ ಲೋಪ ಎಸಗುವ ಶಿಕ್ಷಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಬೇಕು ಆಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.