ನಂದವಾಡಗಿ ೧೨: ಬಾಗಲಕೋಟೆ ಜಿಲ್ಲೆಯ ಹುನಗುಂದ /ಇಲಕಲ್ ತಾಲೂಕಿನ ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಕಲಿಕಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಕ್ಕಳಲ್ಲಿ ಕಲಿಕೆ ಬಲಗೊಳ್ಳಲು ಹಾಗೂ ಸ್ಪರ್ಧಾ ಮನೋಭಾವನೆಯನ್ನು ಮೂಡಿಸಲು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಲಿಕಾ ಸಪ್ತಾಹ ಕಾರ್ಯಕ್ರಮವನ್ನು ಶಾಲಾ ಮಂತ್ರಿಮಂಡಲದವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶಾಲೆಯ ಮುಖ್ಯ ಗುರುಮಾತೆ ವಿ ಬಿ ಕುಂಬಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣರಾಜ್ಯೋತ್ಸವ ಅಂಗವಾಗಿ ಶಾಲೆಯಲ್ಲಿ ಏಳು ದಿನಗಳವರೆಗೆ ಕಲಿಕೆಗೆ ಸಂಬಂಧಪಟ್ಟಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾಷಣ, ಪ್ರಬಂಧ,ಅಭಿನಯ ಗೀತೆ,ಕಥೆ ಹೇಳುವುದು, ರಸಪ್ರಶ್ನೆ ಕಾರ್ಯಕ್ರಮ, ಉಕ್ತಲೇಖನ, ಚಿತ್ರಕಲೆ,,ರಂಗೋಲಿಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇವುಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಲು ಹಾಗೂ ಕಲಿಕೆಯನ್ನು ಮತ್ತಷ್ಟು ಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಗಣರಾಜ್ಯೋತ್ಸವ ದಿನದಂದು ಪಾರಿತೋಷಕವನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಶಾಲಾ ಮುಖ್ಯ ಗುರುಮಾತೆ ವಿ ಬಿ ಕುಂಬಾರ. ಮ