ಕೊಲ್ಲಾಪುರ ವಿಧಾನ ಸಭೆ ಚುನಾವಣೆ ಒಟ್ಟು 10 ಕ್ಷೇತ್ರದಲ್ಲಿ ಆಯ್ಕೆಯಾಗಲಿರುವ ಅಭ್ಯರ್ಥಿಗಳು.ಹಿರಿಯ ನಾಗರಿಕರ ಸಮೀಕ್ಷೆಯಲ್ಲಿಯ ಅಂದಾಜು ಫಲಿತಾಂಶ. ನಿಜವಾದ ಫಲಿತಾಂಶ ನಾಳೆ ನ.23ರಂದು
ಕೊಲ್ಲಾಪುರ ಎಂದಾಕ್ಷಣ ನೆನಪಾಗುವುದು ಆದಿಶಕ್ತಿ ಮಹಾಲಕ್ಷ್ಮಿ ಮಂದಿರ,ದಕ್ಷಿಣದ ರಾಜ ಜ್ಯೋತಿಬಾ ಮಂದಿರ,ಶಾಹೂ ಮಹಾರಾಜರು, ಕುಸ್ತಿ ಮೈದಾನದಲ್ಲಿಯ ಖ್ಯಾತ ಮಲ್ಲರು, ಫುಟ್ಬಾಲ್ ಪ್ರೇಮಿಗಳು, ಜಿಲ್ಲೆಯಲ್ಲಿಯ ನದಿಗಳು, ಸಕ್ಕರೆ ಕಾರ್ಖಾನೆಗಳು, ಕೈಗಾರಿಕೆ ಔದ್ಯೋಗಿಕ ಕಾರ್ಖಾನೆಗಳು,ಗೋಕುಳ, ವಾರಣಾ ಹಾಲು ಉತ್ಪಾದಕ ಸಂಘಗಳು,ಕೊಲ್ಲಾಪುರಿ ಚಪ್ಪಲಿಗಳು,ಬಾಯ ಚಪ್ಪರಿಸುವ ಬೆಲ್ಲ, ಮಿಸ್ಸಳ,ಕೆಂಪು,ಬಿಳಿ,ರಸ್ಸಾ, ಸಾಂಬಾರುಗಳು, ಜೊತೆಗೆ ಹೈಡ್ರಾಮ ರಾಜಕೀಯ. ಹಾಗಾದ್ರೆ ಬನ್ನಿ ನವೆಂಬರ್ 20ರಂದು ಮಹಾರಾಷ್ಟ್ರ ಸೇರಿ ಕೊಲ್ಲಾಪುರದ ವಿಧಾನಸಭೆ ಚುನಾವಣೆಗೆ ನಡೆದ 10 ಮತಕ್ಷೇತ್ರಗಳಲ್ಲಿಯ ಹಿರಿಯರಿಂದ ಸಮೀಕ್ಷೆಯ ಮೇರೆಗೆ ಪಡೆದ ಪಲಿತಾಂಶ ನೀಡುತ್ತಿದ್ದೇವೆ. ಇದು ಅಂದಾಜಿನ ಫಲಿತಾಂಶ ನಿಜವಾದ ಪಲಿತಾಂಶವಲ್ಲ.! ನಿಜವಾದ ಫಲಿತಾಂಶ ನವೆಂಬರ್ 23 ನಾಳೆ ಮತಎಣಿಕೆಯ ನಂತರ. ಕೊಲ್ಲಾಪುರ ಜಿಲ್ಲೆಯಲ್ಲಿಯ ಮತಕ್ಷೇತ್ರ (1)ಕೊಲ್ಲಾಪುರ ಉತ್ತರ – ರಾಜೇಶ ಕ್ಷೀರಸಾಗರ,ಮತಕ್ಷೇತ್ರ 2 ಕೊಲ್ಲಾಪುರ ದಕ್ಷಿಣ ಆಯ್ಕೆಯಾಗಲಿರುವ ಅಭ್ಯರ್ಥಿಅಮೋಲ್ ಮಹಾಡಿಕ್, ಕಾಗಲ್ ಮತಕ್ಷೇತ್ರ (3)ಕಾಗಲ – ಸಮರಜಿತ್ ಘಾಟಗೆ,ಚಂದಗಡ ಮತಕ್ಷೇತ್ರ ಶಿವಾಜಿ ಪಾಟೀಲ. ಈಚಲಕರಂಜಿ ಮತಕ್ಷೇತ್ರ ರಾಹುಲ್ ಅವಾಡೆ, ಶಿರೋಳ್ ಮತಕ್ಷೇತ್ರ ಗಣಪತರಾವ್ ಪಾಟೀಲ, ಹಾತಕನಂಗಲೇ ಮತಕ್ಷೇತ್ರ ರಾಜೀವ್ ಅವಳೇ,ಶಾಹು ವಾಡಿ ಮತಕ್ಷೇತ್ರ ಡಾ. ವಿನಯ ಕೋರೆ, ಕರವೀರ ಮತಕ್ಷೇತ್ರ ರಾಹುಲ್ ಪಾಟೀಲ್ ರಾಧಾ ನಗರಿ ಮತಕ್ಷೇತ್ರ ಪ್ರಕಾಶ ಅಭಿಟಕರ ಆಯ್ಕೆಯಾಗುವ ಸಾಧ್ಯತೆಗಳಿವೆ.
ವರದಿ: ಮಹಾವೀರ ಚಿಂಚಣೆ