ಹುಬ್ಬಳ್ಳಿ ಧಾರವಾಡ: ಅವಳಿ ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಸ್ಮಾರ್ಟ್ ಸಿಟಿ ಲಿಮಿಟೆಡ್ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ನಗರದ ಸಾರಿಗೆ ಸಂಚಾರ ಅತ್ಯಂತ ಸುಗಮವಾಗುವದಲ್ಲದೆ ನಗರದ ಮದ್ಯದಲ್ಲಿ ನೆಲೆಸಿರುವ ಹುಬ್ಬಳ್ಳಿಯ ಬ್ರಹತ್ ಬಸ್ ನಿಲ್ದಾಣ ಜನರಿಗೆ ಸಂಚಾರಿಸಲು ಬಹಳ ಅನುಕೂಲವಾಗುವಂತೆ ನಿರ್ಮಿಸಲಾಗಿದೆ.
ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ,ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್,ಶಾಸಕರಾದ ಅರವಿಂದ್ ಬೆಲ್ಲದ, ಮಹೇಶ್ ತೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್,ಹೆಸ್ಕಾಂ ಅಧ್ಯಕ್ಷರಾದ ಶ್ರೀ ಸಯೇದ್ ಅಜೀಮ್ ಪೀರ್ ಎಸ್ ಖಾದ್ರಿ, ಮಹಾಪೌರರಾದ ಶ್ರೀ ರಾಮಪ್ಪ ಬಡಿಗೇರ್ ಹುಡದ ಅಧ್ಯಕ್ಷರಾದ ಶ್ರೀ ಶಾಕಿರ್ ಸನದಿ ಹಾಗೂ ಪಾಲಿಕೆಯ ಸದಸ್ಯರುಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ವಿನಾಯಕ ಗುಡ್ಡದಕೇರಿ