ಚಿಂತಾಮಣಿ ನಗರದ ವಾರ್ಡ್ ನಂ:16 ರ ಗಾಂಧಿನಗರದಲ್ಲಿರುವ ಗೌಸೇ ಪಾಕ್ ನಶಾನ್-ನ ಹಾಗೂ ಖಾಜಾ ಗರೀಬ್ ನವಾಜ್ ನಶಾನ್ ಗಳ ಗಂಧೋತ್ಸವವನ್ನು ರಾತ್ರಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಗಂಧೋತ್ಸವದಲ್ಲಿ ಆಗಮಿಸಿದ್ದ ಭಕ್ತಾದಿಗಳಿಗೆ ಊಟ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸದರಿ ವಾರ್ಡ್ ನಿಂದ ಗಂಧವನ್ನು ಹೊತ್ತು ವಾರ್ಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ನಶಾನ್ ಬಳಿ ಆಗಮಿಸಿ ಚಾದರ್ ಅರ್ಪಿಸಿ ಪಕೀರರು ಕವಾಲಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಹಬೂಬ್ ಪೀರ್,ಅಸ್ಲಾಂ ಭಾಷಾ,ಸೈಯದ್ ಅಲಿ,ಅಬ್ದುಲ್ ಖಯ್ಯೂಮ್,
ಶಬ್ಬೀರ್,ಆಫ್ಜಲ್,ಅಕ್ಮಲ್,ಖಾದರ್ ಭಾಷಾ,ಸಲ್ಲು,ಶಹೀಂ-ಷಾ ಕಲಂದರ್,ರಾಹಿಲ್,ಅನ್ವರ್,ಬಾಬಾ,
ಗಿಡ್ಡು,ಸುಭಾನ್,ಅಯಾಜ್,ಸೇರಿದಂತೆ ಮುಂತಾದವರು ಇದ್ದರು.
ವರದಿ :ಯಾರಬ್. ಎಂ.




