ಅಥಣಿ: ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ, ಸ್ವಯಂ ಶಿಸ್ತು, ಜ್ಞಾನ, ಕಠಿನ ಪರಿಶ್ರಮ ಮತ್ತು ಪ್ರತಿಭೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ನೀಡಬೇಕು. ಪಾಲಕರು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಡಬೇಕು ಮಕ್ಕಳು ಮೊಬೈಲ ಬಳಕೆಯಿಂದ ದೂರವಿರಲು ತಿಳುವಳಿಕೆ ನೀಡಬೇಕು ಮೊಬೈಲ್ ಬದಲು ಪುಸ್ತಕ ಕೊಡಿ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿದಾಗ ಮಾತ್ರ ಎತ್ತರ ಸ್ಥಾನಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮುಖ್ಯ ಅತಿಥಿಗಳಾದ ಖ್ಯಾತ ವಕೀಲರಾದ ಕೆ .ಎಲ್. ಕುಂದರಗಿ ಅವರು ಹೇಳಿದರು.
ಅವರು ಅಥಣಿ ನಗರದ ಜೆ. ಇ ಸಂಸ್ಥೆಯ ವೆಂಕಟೇಶ್ ಜೇರೆ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕಮಲಾಬಾಯಿ ಪೂರ್ವ ಪ್ರಾಥಮಿಕ ಶಾಲೆ ( ಬಾಲ ವಾಡಿ) ಅಥಣಿ 2024-2025 ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಈ ಪಾರಿತೋಷಕ ವಿತರಣಾ ಸಮಾರಂಭ ಹಾಗೂ ಸರಸ್ವತಿ ದೇವಿಯ ಪೂಜೆ ದೊಂದಿಗೆ ಚಾಲನೆ ನೀಡಿ ಮಾತನಾಡಿದರು.
ನಂತರ ಡಾ. ರಾಮ್ ಬಿ ಕುಲಕರ್ಣಿ ಕಾರ್ಯಧ್ಯಕ್ಷರು ಅವರು ಮಾತನಾಡಿ ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಪುಸ್ತಕ ಓದುವ ಹವ್ಯಾಸ ಮಕ್ಕಳು ಈಗಿನಿಂದಲೇ ರೂಡಿ ಮಾಡಿಕೊಳ್ಳುವ ಹವ್ಯಾಸ ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಉತ್ತಮವಾದ ಸಾಧನೆಗೆ ಸಹಕಾರಿಯಾಗುತ್ತದೆ ಇಲ್ಲಿ ಕಲಿಯುವಂತಹ ಮಕ್ಕಳು ಶಾಲೆ ಕೀರ್ತಿ ತರಬೇಕು. ಶಾಲೆಯು ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಶಾಲೆಯ ಕೀರ್ತಿ ಹೆಚ್ಚಿಸಲಿ ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯರು ಜಿ ಆಯ್ .ಪಾಟೀಲ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.ಅದರಂತೆ ಶ್ರೀಮತಿ ಎಸ್ ಎನ್ ಗೋಠೆ ಅವರು ೨೦೨೪/೨೫ ಸಾಲಿನ ವರ್ಷದ ವರದಿಯನ್ನು ಹೇಳಿದರು. ವೇದಿಕೆ ಮೇಲಿನ ಗಣ್ಯಮಾನ್ಯರಿಂದ
ಈ ಸಂದರ್ಭದಲ್ಲಿ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು.ಕು. ಕಾರ್ತಿಕ ಮಾಳಿ ಇತನು ಈ ವರ್ಷದ ಆದರ್ಶ ವಿಧ್ಯಾರ್ಥಿ ಮತ್ತು ಕು.ಅರ್ಪಿತಾ ನಿಂಬರಗಿ ಆದರ್ಶ ವಿಧ್ಯಾರ್ಥಿನಿ ಎಂದು ಮುಖ್ಯ ಅತಿಥಿಗಳು ಸನ್ಮಾನಿಸಿದರು.
ಮಕ್ಕಳ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿದವು.ಹಾಗೂ ಶ್ರೀಮತಿ ಎಸ್ ಬಿ ಕರೊಶಿ ಮತ್ತು ಶ್ರೀಮತಿ ಎ ಬಿ ಅಪರಾಜ ಅವರು ನಿರೂಪಿಸಿದರು.ಶ್ರೀಮತಿ ಎನ್ ಎನ್ ಕುಲಕರ್ಣಿ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಪಾಲಕರು, ಸಿಬ್ಬಂದಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ರಾಜು ವಾಘಮಾರೆ.