ರಾಯಚೂರು:ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆ ಕುರಿತು ಸಭಾಪತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪ್ರಕರಣ ರಾಜ್ಯದ ಇತಿಹಾಸದಲ್ಲಿ ವಿಧಾನ ಸಭಾ,ವಿಧಾನ ಪರಿಷತ್ತಿನ ಸಭಾಪತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರದಿರ್ಲಿಲ್ಲ
ಇಡೀ ವಿಧಾನ ಪರಿಷತ್ ನಲ್ಲಿ ಸಂಪೂರ್ಣ ಅಧಿಕಾರ ಸಭಾಪತಿಗಳಿಗೆ ಇರತ್ತೆ ಅಲ್ಲಿ ಏನೇ ಗಲಭೆ ಆದ್ರೆ,ಗಲಾಟೆ ಆದ್ರೆ ಅದರ ಬಗ್ಗೆ ಚಿಂತನೆ ಮಾಡುವುದು
ಅದನ್ನ ಹದ್ದು ಬಸ್ತಲ್ಲಿಡೋದು,ಕ್ರಮಕೈಗೊಳ್ಳೋದು ಸಭಾಪತಿಗಳಿಗೆ ಬಿಟ್ಟ ವಿಚಾರ ಸಿಟಿ ರವಿ-ಹೆಬ್ಬಾಳ್ಕರ್ ಮಾತಿನ ಚಕಮಕಿ ಸಂಬಂಧ ದಾಖಲೆಗಳನ್ನ ನೋಡಿದ್ದೇವೆ .ಅಲ್ಲಿ ಸಿಟಿ ರವಿ ಯಾವುದೇ ಅವಾಚ್ಯ ಶಬ್ಧ ಬಳಸಿಲ್ಲ ಅಂತ ರೂಲಿಂಗ್ ಕೊಟ್ಟ ಬಳಿಕವೂ ಸಿಐಡಿಗೆ ರಾಜ್ಯ ಸರ್ಕಾರ ಯಾಕೆ ಕೊಟ್ಟಿತು,
ಅದರ ಕುರಿತು ರಾಜ್ಯ ಸರ್ಕಾರಕ್ಕೆ ಸಭಾಪತಿ ಪತ್ರ ಬರೆದಿರೋದರ ಅರ್ಥ ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ ಅನ್ನೋದು ನೀವು ಸಂವಿಧಾನಕ್ಕೆ ಇದೇ ಬೆಲೆ ಕೊಡೊದಾ..
ಕೂಡಲೇ ಸಭಾಪತಿಗಳಿಗೆ ಕ್ಷಮೆ ಕೇಳಿ,ಪೂರ್ಣ ತನಿಖೆ ಸಭಾಪತಿಗಳು ಮಾಡಲಿ
ತಪ್ಪಿತಸ್ಥರು ಯಾರೇ ಇದ್ರೂ ಕ್ರಮಕೈಗೊಳ್ಳಿ.. ಸರ್ಕಾರ ಸಿಐಡಿ ತನಿಖೆ ಹಿಂಪಡೆದು ಸಭಾಪತಿಗಳ ಗೌರವ ಉಳಿಸಿಕೊಡಬೇಕು
ವರದಿ: ಗಾರಲದಿನ್ನಿ ವೀರನಗೌಡ