ಮೊಳಕಾಲ್ಮೂರು :- ಚನ್ನಪಟ್ಟಣ ಸಂಡೂರು ಶಿಗ್ಗಾವಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿರುವುದಕ್ಕೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಸೇರಿ ಖಾಸಗಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಮಾತನಾಡಿ ಮಾತನಾಡಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ ಕರ್ನಾಟಕ ಜನತೆ ಗೊತ್ತಿದೆ ಕಾಂಗ್ರೆಸ್ ಪಕ್ಷ ಮಾತ್ರ ದಕ್ಷ ಆಡಳಿತ ನೀಡುವ ಪಕ್ಷ. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ನೀಡಿ ದಲಿತರ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಕಡೆಗಣಿಸದೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಟಿ ನಾಗಭೂಷಣ್ ಮಾತನಾಡಿ 3 ಕ್ಷೇತ್ರಗಳಲ್ಲಿ ಅತ್ಯಂತ ಪ್ರಚಂಡ ಬಹುಮತಗಳಿಂದ ಗೆದ್ದಿರುವ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರ ನೇತೃತ್ವದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ, ಕಾಂಗ್ರೆಸ್ ಪಕ್ಷ ಮಾತ್ರ ಅಭಿವೃದ್ಧಿಗೆ ಪೂರಕವಾಗಿದೆ, ಆದ್ದರಿಂದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮ ಸುಧಾ ಮಾತನಾಡಿ, ಮೂರೂ ಕ್ಷೇತ್ರಗಳಲ್ಲಿ ವಿಜಯೋತ್ಸವ ಕಂಡು ಜನತೆಗೆ ಕಾಂಗ್ರೆಸ್ ಪಕ್ಷ ಭದ್ರಬುನಾದಿಯಾಗಿ ನಿಂತಿದೆ, ಬಿಜೆಪಿಯವರ ಇಲ್ಲಸಲ್ಲದ ಆರೋಪಿಗಳಿಗೆ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ, ಚಿತ್ರದುರ್ಗ ಮೊಳಕಾಲ್ಮೂರು ಚಳ್ಳಕೆರೆ ಹಿಂದುಳಿದ ಭಾಗ ಈ ಭಾಗದ ಜನಗಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅರಿತು ಈ ಪಕ್ಷಕ್ಕೆ ಮತ ನೀಡಿದ್ದಾರೆ ಎಂದರು.
ಅದೇ ರೀತಿ ಮುಖಂಡರಾದ ಮಾರನಾಯಕ ಕೂಡ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮುಲ್ಲಾ ಪಟೇಲ್ ಜಿ ಪಾಪ್ ನಾಯಕ್ ಜಿಪಿ ಸುರೇಶ್ ಕಾಂಗ್ರೆಸ್ ಮುಖಂಡರಾದ ದೇವಯ್ಯ,ಹೆಜ್ಜೇನಳ್ಳಿ ನಾಗರಾಜ್ ಪಾಪಣ್ಣ ಬೋರಣ್ಣ ಪಿ ಗೋಪಾಲ್ ತುಮಕೂರಹಳ್ಳಿ ಪ್ರಹಲ್ಲಾದ್, ಜುಬೇರ ಅಹಮದ್,ಇನ್ನು ಅನೇಕ ಕಾರ್ಯಕರ್ತರು ಮುಖಂಡರು ಇನ್ನೂ ಹಲವಾರು ಉಪಸ್ಥಿತರಿದ್ದರು.
ವರದಿ ಪಿಎಂ ಗಂಗಾಧರ