ಚೇಳೂರು : ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕರಾದ ಎಸ್ ಎನ್ ಸುಬ್ಬಾರೆಡ್ಡಿ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಶಾಸಕಾರದ ಸುಬ್ಬಾರೆಡ್ಡಿ ಮಾತನಾಡಿ ಎಸ್ ಎಸ್ ಎಲ್ ಸಿ ಮಕ್ಕಳು ಇನ್ನು ಎರಡು ತಿಂಗಳಲ್ಲಿ ಪರೀಕ್ಷೆಗಳು ಇರುವುದರಿಂದ, ಓದಿನ ಕಡೆ ಗಮನಹರಿಸಬೇಕೆಂದು, ತಿಳಿಸಿದರು.
ಶಾಲಾ ಮಕ್ಕಳಿಗೆ ಉಪಯುಕ್ತ ವಾಗಲಿ ಎಂದು, ಶಾಲೆಯ ಶಿಕ್ಷಕರುಗಳಿಂದಲೇ ಪ್ರೇರಣೆ ನೀಡಲಾಯ್ತು, ವಿದ್ಯಾರ್ಥಿಗಳಿಗೆ ಓದಲು ಎನಾದರೂ ಸಹಾಯ ಬೇಕಾದರೆ ನಾನು ಸದಾ ಸಿದ್ದನಾಗಿರುತ್ತೇನೆ ಎಂದು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಜನಾರ್ಧನ್, ತಹಸೀಲ್ದಾರ್ ಶ್ರೀನಿವಾಸಲು ನಾಯ್ಡು,ಪಿ ಡಿ ಓ ವೆಂಕಟಾಚಲಪತಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೌಸ್ತರ್,ಬಿ ಇ ಓ ವೆಂಕಟೇಶಪ್ಪ, ಮಾಜಿ ಅಧ್ಯಕ್ಷರಾದ ಪಿ, ಆರ್, ಚಲಂ ಕೆ ಜಿ ವೆಂಕಟರವಣ, ಜಾಲಾರಿ,ಸುರೇಂದ್ರ, dss ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರಮಣ,ಸಹದೇವರೆಡ್ಡಿ,ನಯಾಜ್,ಸಾವುಕಾರ್ ಶ್ರೀನಿವಾಸ್ ಚೇಳೂರು ಸರ್ಕಾರಿ ಶಾಲೆಯ ಮುಖ್ಯಪಾಧ್ಯಾಯರಾದ ಜಿಲಾನ್ ಭಾಷಾ, ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ