ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ವ್ಯಾಪ್ತಿಗೆ ಬರುವ ಸುವರ್ಣ ನಗರದಲ್ಲಿ ಗಜ ಗೆಳೆಯರ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನವೀನ್ ಗೌಡ್ರು ಮತ್ತು ಟ್ರಸ್ಟಿನ ಪದಾಧಿಕಾರಿಗಳ ನಗದರ ಮುಖಂಡರ ನೇತೃತ್ವದಲ್ಲಿ ಜಗನ್ಮಾತೆ ಶ್ರೀ ಮಹೇಶ್ವರಮ್ಮ ಮತ್ತು ಶ್ರೀ ಅಣೇಮ್ಮನ 5ನೇ ವರ್ಷದ ಸಮಾರಂಭವನ್ನು ಆಯೋಜಿಸಲಾಗಿತ್ತು.
ಮೊದಲನೇಯ ದಿನದಂದು ಶ್ರೀ ಮಹೇಶ್ವರಮ್ಮ ಶ್ರೀಅಣೇಮ್ಮ ದೇವಿಯ ಅಲಂಕಾರಿಕ ಮಹಾ ಪೂಜೆ ಪುನಸ್ಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ಜರುಗಿದವು ನಂತರ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎರಡನೇ ದಿನ ಮಹೇಶ್ವರಮ್ಮ ಶ್ರೀಅಣೇಮ್ಮ ದೇವಿಯ ಅಲಂಕಾರಿಕ ಮಹಾ ಪೂಜೆ ಪುನಸ್ಕಾರ ಮಹಿಳೆಯರಿಂದ ಮಹಾಮಂಗ ಳಾರತಿ ತೀರ್ಥ ಪ್ರಸಾದ ನಂತರ ಸಾವಿರಾರು ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಶಾಖಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು ನಂತರ ಮಹಿಳೆಯರಿಂದ ಮತ್ತು ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
ಕೊನೆಯ ದಿನ ಶ್ರೀ ಮಹೇಶ್ವರಮ್ಮ ಶ್ರೀಅಣೇಮ್ಮ ದೇವಿಯ ಅಲಂಕಾರಿಕ ಮಹಾ ಪೂಜೆ ಪುನಸ್ಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಸುವರ್ಣ ನಗರದ ಮುಖ್ಯ ರಸ್ತೆಗಳಲ್ಲಿ ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಡೊಳ್ಳು ಕುಣಿತ, ವೀರಗಾಸೆ, ನೃತ್ಯ, ಕೋಲಾಟ ವಿವಿಧ ಕಲಾತಂಡಗಳಿಂದ ಶ್ರೀ ಮಹೇಶ್ವರಮ್ಮ ಶ್ರೀಅಣೇಮ್ಮ ಮುತ್ತಿನ ಪಲ್ಲಕ್ಕಿಯಲ್ಲಿ ಮತ್ತು ಬೆಳ್ಳಿ ರಥ ಮೂಲಕ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಮಹೇಶ್ವರಮ್ಮ, ಶ್ರೀಅಣೇಮ್ಮ ಭಕ್ತರು ಮತ್ತು ಟ್ರಸ್ಟಿನ ಮುಖಂಡರಾದ ಅರವಿಂದ್, ಮೋಹನ್ ಕುಮಾರ್, ವೆಂಕಟಚಲಪ್ಪ, ಮುರಳಿ ಸೇರಿದಂತೆ ಸಾರ್ವಜನಿಕರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ವರದಿ: ಅಯ್ಯಣ್ಣ ಮಾಸ್ಟರ್